ಮುದ್ದೇಬಿಹಾಳ ತಾಲೂಕಿನ ನೇಬಗೇರಿಯಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ನಾಲ್ಕು ಮೇಕೆಗಳು, ಒಂದು ಕುರಿ ಮೃತಪಟ್ಟಿದ್ದರೇ, ಸಿದ್ದಾಪುರ ಪಿಟಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಆಕಳು ಮೃತಪಟ್ಟಿದೆ. 
ಜಿಲ್ಲೆ

ಸಿಡಿಲಿಗೆ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮದಲ್ಲಿ ಆಕಳು, ನೇಬಗೇರಿಯಲ್ಲಿ ನಾಲ್ಕು ಮೇಕೆ, ಕುರಿ ಬಲಿ

ಮುದ್ದೇಬಿಹಾಳ: ತಾಲೂಕಿನಲ್ಲಿ ಶುಕ್ರವಾರ ಸಂಜೆ ಮಳೆ ಸುರಿದಿದ್ದು, ಸಿಡಿಲಿನ ಆರ್ಭಟಕ್ಕೆ ಪ್ರತ್ಯೇಕ ಎರಡು ಘಟನೆಗಳಲ್ಲಿ ಜಾನುವಾರು ಪ್ರಾಣ ಕಳೆದುಕೊಂಡಿವೆ.

ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮದಲ್ಲಿ ಬಸಪ್ಪ ಕೆ.ಗೋಡಿಕಾರ ಅವರ ಆಕಳು ಸಿಡಿಲಿಗೆ ಬಲಿಯಾಗಿದೆ.

ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಶಿವಪ್ಪ ಬ.ಬಿಸಲದಿನ್ನಿ ಅವರಿಗೆ ಸೇರಿದ ನಾಲ್ಕು ಆಡು, ಒಂದು ಕುರಿ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿವೆ.

ಹೊಲದಲ್ಲಿ ಗಿಡದ ಬುಡದಲ್ಲಿ ಕಟ್ಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕುರಿ ಕಾಯಲು ಹೋಗಿದ್ದ ಯಮನಪ್ಪ ಬಿಸಲದಿನ್ನಿ ಹಾಗೂ ಬಸವರಾಜ ಮಕಾಶಿ ಸಿಡಿಲಿನ ಹೊಡೆತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.