ಕನಕಗಿರಿಯ ಬ್ಲಾಕ್ ಕಾಂಗ್ರೆಸ್ ಕಚೇರಿ ಸುತ್ತ ಮಳೆ ನೀರು ನಿಂತಿರುವುದು.  
ಜಿಲ್ಲೆ

ಜೂನ್‌ನಲ್ಲಿ ಬಿತ್ತನೆ ಸೂಕ್ತ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಗುಡುಗು ಸಿಡಿಲು ಸಹಿತ ಶನಿವಾರ ತಡರಾತ್ರಿ ಹಾಗೂ ಭಾನುವಾರ ರಾತ್ರಿ ಸುರಿದ ಮಳೆಗೆ ಭೂಮಿ ತಂಪಾಗಿದ್ದು, ರೈತರಿಗೆ ಹರ್ಷ ತಂದಿದೆ.

ಈಗಾಗಲೇ ಭೂಮಿ ಹದ ಮಾಡಿಕೊಂಡಿರುವ ಕೆಲ ರೈತರು ಬಿತ್ತನೆ ಆರಂಭಿಸಿದ್ದು, ಅನೇಕರು ಇನ್ನಷ್ಟು ದಿನ ಮುಂದೂವ ಚಿಂತನೆ ಮಾಡಿದ್ದಾರೆ. ಎರಡು ದಿನಗಳ ಮಳೆಯಿಂದ ತಗ್ಗು ಪ್ರದೇಶಗಳು ನೀರಿನಿಂದ ತುಂಬಿಕೊಂಡಿವೆ.

ರಸ್ತೆಯಲ್ಲಿ ನೀರು ಹರಿದಿದ್ದು, ಸಂಚಾರಕ್ಕೆ ತೊಂದರೆಯಾಗಿರುವುದು ಕಂಡು ಬಂತು. ಬ್ಲಾಕ್ ಕಾಂಗ್ರೆಸ್ ಕಚೇರಿ ಸುತ್ತಲೂ ಮಳೆ ನೀರು ನಿಂತಿದ್ದು, ಸಾರ್ವಜನಿಕರು ಸಂಚರಿಸಲು ತೊಂದರೆಯಾಯಿತು.

ಇದೀಗ ಮಳೆಯಾಗುತ್ತಿದ್ದು, ನಂತರ ಮಳೆಯಾಗದಿದ್ದರೆ ತೇವಾಂಶ ಕೊರತೆಯಿಂದ ಮೊಳಕೆಯೊಡೆದ ಬೀಜಗಳು ಒಣಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ಜೂನ್‌ನಲ್ಲಿ ಬಿತ್ತನೆ ಮಾಡುವುದು ಉತ್ತಮ.

ಸಂತೋಷ ಪಟ್ಟದಕಲ್, ಎಡಿ ಕೃಷಿ ಇಲಾಖೆ ಗಂಗಾವತಿ