ತುಂಬೆ ಗ್ರೂಪ್, ಯುಎಇ ಯಲ್ಲಿರುವ ಅಕಾಡೆಮಿಕ್ ಡಯಾಗ್ನೋಸ್ಟಿಕ್ ರೆಫರಲ್ ಪ್ರಯೋಗಾಲಯವನ್ನು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯಿದ್ದೀನ್ ವೀಕ್ಷಿಸಿದರು.
- ಸಿಎಪಿ, ಐಎಸ್ಒ 15189:2022 ಮಾನ್ಯತೆ
- ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ಹೇಳಿದ್ದಾರೆ.
ಮಂಗಳೂರು: ಯುಎಇಯಲ್ಲಿ 25 ವರ್ಷಗಳ ರೋಗನಿರ್ಣಯ ಸೇವೆಯನ್ನು ಪೂರೈಸುತ್ತಿರುವ ತುಂಬೆ ಲ್ಯಾಬ್ಸ್, ಉತ್ತರ ಎಮಿರೇಟ್ಸ್‌ನಲ್ಲಿರುವ ಅಕಾಡೆಮಿಕ್ ಡಯಾಗ್ನೋಸ್ಟಿಕ್ ರೆಫರಲ್ ಪ್ರಯೋಗಾಲಯದ ಅತಿ ದೊಡ್ಡ ನೆಟ್‌ವರ್ಕ್ ಆಗಿದೆ. ಇದು ವೈದ್ಯಕೀಯ ಪ್ರಯೋಗಾಲಯಗಳಲ್ಲಿನ ಗುಣಮಟ್ಟ ಮತ್ತು ಸಾಮರ್ಥ್ಯದ ಅಂತರರಾಷ್ಟ್ರೀಯ ಮಾನದಂಡವಾದ ಐಎಸ್ಒ 15189:2022 ಮಾನ್ಯತೆಯನ್ನು ಗಳಿಸಿದೆ. ಈ ಮಾನ್ಯತೆಯು ಪ್ರಯೋಗಾಲಯವು ಈಗಾಗಲೇ ಹೊಂದಿರುವ ಕಾಲೇಜ್ ಆಫ್ ಅಮೆರಿಕನ್ ಪ್ಯಾಥಾಲಜಿಸ್ಟ್ (ಸಿಎಪಿ) ಮಾನ್ಯತೆಯೊಂದಿಗೆ ಸೇರಿಕೊಂಡಿದೆ ಎಂದು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ಹೇಳಿದ್ದಾರೆ.
25,000 ಚದರ ಅಡಿ ವಿಸ್ತೀರ್ಣ
2001ರಲ್ಲಿ ತುಂಬೆ ಲ್ಯಾಬ್ಸ್ ಸಂಸ್ಥೆಯ ಮೊದಲ ಆಸ್ಪತ್ರೆ ಮತ್ತು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಕ್ಲಿನಿಕಲ್ ತರಬೇತಿಗೆ ಬೆಂಬಲ ನೀಡಲು ಸ್ಥಾಪಿಸಲಾದ ಒಂದು ಸಣ್ಣ ಘಟಕವಾಗಿ ಪ್ರಾರಂಭವಾಯಿತು. ಆರಂಭದಲ್ಲಿ ಕೇವಲ ಒಂದು ಲ್ಯಾಬ್ ಆಗಿದ್ದ ಇದು ಇಂದು 5 ಲ್ಯಾಬ್‌ಗಳ ಜಾಲವಾಗಿ ಮತ್ತು ಯುಎಇಯ ಅತ್ಯಂತ ಸುಧಾರಿತ ಪ್ರಯೋಗಾಲಯ ವ್ಯವಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಪ್ರಸ್ತುತ ಇದು ತುಂಬೆ ಮೆಡಿಸಿಟಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದ ರೋಗನಿರ್ಣಯ ಸಂಕೀರ್ಣದೊಂದಿಗೆ ಉತ್ತರ ಎಮಿರೇಟ್ಸ್‌ನಾದ್ಯಂತ ತನ್ನ ಕೇಂದ್ರಗಳನ್ನು ಹೊಂದಿದೆ.
1.9 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ
ಕಳೆದ 25 ವರ್ಷಗಳಲ್ಲಿ ತುಂಬೆ ಲ್ಯಾಬ್ಸ್ 19 ದಶಲಕ್ಷಕ್ಕೂ (1.9 ಕೋಟಿ) ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು 1,00,000ಕ್ಕೂ ಹೆಚ್ಚು ಶಿಶುಗಳ ಜನನವಾಗಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಈ ಪ್ರಯೋಗಾಲಯವು ಪ್ರಾದೇಶಿಕ ಮಾಲಿಕ್ಯೂಲರ್ ಟೆಸ್ಟಿಂಗ್ ಕೇಂದ್ರವಾಗಿ ಹಗಲು-ರಾತ್ರಿ ಕಾರ್ಯನಿರ್ವಹಿಸಿತ್ತು. ಅಂದು ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಿತ್ತು. ಯುಎಇಯಾದ್ಯಂತ ತುಂಬೆ ಲ್ಯಾಬ್ಸ್ ಅಂದಾಜು 30 ದಶಲಕ್ಷಕ್ಕೂ (3 ಕೋಟಿ) ಹೆಚ್ಚಿನ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿತ್ತು.
ಅಬುಧಾಬಿಯಲ್ಲೂ ಶೀಘ್ರ ಹೊಸ ಲ್ಯಾಬ್
ತುಂಬೆ ಲ್ಯಾಬ್ಸ್ ಕ್ಲಿನಿಕಲ್ ಕೆಮಿಸ್ಟ್ರಿ, ಹೆಮಟಾಲಜಿ, ಮೈಕ್ರೋಬಯಾಲಜಿ, ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್, ಎಸೊಟೆರಿಕ್ ಮತ್ತು ಬಯೋ ಅನಲಿಟಿಕಲ್ ಟೆಸ್ಟಿಂಗ್, ಔದ್ಯೋಗಿಕ ಆರೋಗ್ಯ, ಹಿಸ್ಟೋಪ್ಯಾಥಾಲಜಿ ಮತ್ತು ನವಜಾತ ಶಿಶುಗಳ ಸ್ಕ್ರೀನಿಂಗ್ ಸೇರಿದಂತೆ ಸಂಪೂರ್ಣ ಶ್ರೇಣಿಯ ರೋಗನಿರ್ಣಯ ವಿಭಾಗಗಳನ್ನು ನಡೆಸುತ್ತಿದೆ. ಹಿಸ್ಟೋಪ್ಯಾಥಾಲಜಿಯು ಅದರ ಕ್ಯಾನ್ಸರ್ ರೋಗನಿರ್ಣಯದ ಕೆಲಸಕ್ಕೆ ಪ್ರಮುಖ ಆಧಾರವಾಗಿದೆ. ಆದರೆ ಅದರ ನವಜಾತ ಶಿಶುಗಳ ಸ್ಕ್ರೀನಿಂಗ್ ಕಾರ್ಯಕ್ರಮವು ಉತ್ತರ ಎಮಿರೇಟ್ಸ್‌ನಲ್ಲಿ ಅತಿ ದೊಡ್ಡದಾಗಿದ್ದು, ಶಿಶುಗಳಲ್ಲಿನ ಚಯಾಪಚಯ ಮತ್ತು ಆನುವಂಶಿಕ ಅಸ್ವಸ್ಥತೆಗಳನ್ನು ಮೊದಲೇ ಪತ್ತೆಹಚ್ಚುತ್ತದೆ. ಶೀಘ್ರದಲ್ಲೇ ಅಬುಧಾಬಿಯಲ್ಲೂ ಹೊಸ ಲ್ಯಾಬ್ ಅನ್ನು ತೆರೆಯಲು ಯೋಜಿಸಲಾಗಿದೆ.
ಸುಧಾರಿತ ಆ್ಯಪ್ ಪರಿಚಯ
ಪ್ರಯೋಗಾಲಯವು ಸುಧಾರಿತ ಮೊಬೈಲ್ ಆ್ಯಪ್ ಮತ್ತು ವೆಬ್ ಆ್ಯಪ್ ಅನ್ನು ಪರಿಚಯಿಸುತ್ತಿದ್ದು, ಇದು ರೋಗಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ಬುಕ್ ಮಾಡಲು ಮತ್ತು ಹಣ ಪಾವತಿಸಲು ಅನುವು ಮಾಡಿಕೊಡುತ್ತದೆ. ಮತ್ತು ಅದರ ಹೋಮ್ ಸ್ಯಾಂಪಲ್ ಕಲೆಕ್ಷನ್ (ಮನೆಯಿಂದಲೇ ಮಾದರಿ ಸಂಗ್ರಹಿಸುವ) ಸೇವೆಯು ಶೀಘ್ರದಲ್ಲೇ ಅಬುಧಾಬಿಗೆ ವಿಸ್ತರಿಸಲಿದೆ ಎಂದು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಹೇಳಿದ್ದಾರೆ.