ಜಿಲ್ಲೆ

ಸಂಜೀವ ಬಂಗೇರ ತಲಪಾಡಿ, ಕೃಷ್ಣಪ್ಪ ಉಪ್ಪೂರು, ಉಲ್ಲಾಸಕೃಷ್ಣರಿಗೆ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

reportermng

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಹಾಗೂ ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪರಸ್ಕಾರ, ಮಾಧ್ಯಮ ಮುರಸ್ಕಾರ, ಸಂಘಟನಾ ಮುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ, ಹೊರ ರಾಷ್ಟ್ರಮಟ್ಟದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ.

ತುಳು ಜಾನಪದ ಕ್ಷೇತ್ರದಲ್ಲಿ ಸಂಜೀವ ಬಂಗೇರ ತಲಪಾಡಿ, ತುಳು ನಾಟಕ/ಸಿನಿಮಾ ವಿಭಾಗದಲ್ಲಿ ಕೃಷ್ಣಪ್ಪ ಉಳ್ಳೂರು, ತುಳು ಸಾಹಿತ್ಯ ವಿಭಾಗದಲ್ಲಿ ಉಲ್ಲಾಸ ಕೃಷ್ಣ ಪೈ ಮತ್ತೂರು ಆಯ್ಕೆಯಾಗಿದ್ದಾರೆ.

ಇದೇ ಸಂಧರ್ಭದಲ್ಲಿ 2021 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ಬೇರೆ ಬೇರೆ ವಿಭಾಗಗಳ ತಲಾ 1 ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ.

ಕವನ ಸಂಕಲನ ವಿಭಾಗದಲ್ಲಿ ಯೋಗೀಶ್ ಕಾಂಚನ್, ಬೈಕಂಪಾಡಿ ಅವರ "ತಂಞನ ಬೊ", ನಾಟಕ ವಿಭಾಗದಲ್ಲಿ ಅಕ್ಷತಾರಾಜ್ ಪೆರ್ಲ ಅವರ “ಬೇಲಿ, ಸಾಪೊದ ಕಣ್", ಅಧ್ಯಯನ ವಿಭಾಗದಲ್ಲಿ ಡಾ. ಅಶೋಕ ಆಳ್ವ ಸುರತ್ಕಲ್ ಅವರ “ತುಳುನಾಡಿನ ಪ್ರಾಣಿ ಜಾನಪದ" ಆಯ್ಕೆ ಆಗಿದೆ.

2021 ನೇ ಸಾಲಿನ ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಮಸ್ತಕ ಬಹುಮಾನಕ್ಕೆ ರೂ. 25,000/- ನಗದು, ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.