ಜಿಲ್ಲೆ

ಗಾಗೇನಹಳ್ಳಿ ಗ್ರಾಪಂಗೆ ತುಳಸಮ್ಮ ಅಧ್ಯಕ್ಷೆ

ಹುಣಸೂರು: ತಾಲೂಕಿನ ಗಾಗೇನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ತುಳಸಮ್ಮ(ಎಸ್‌ಸಿ ಮಹಿಳೆ)ಅವಿರೋಧವಾಗಿ ಆಯ್ಕೆಯಾದರು.

ಪ್ರೀತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಭ್ಯರ್ಥಿಯಾಗಿ ತುಳಸಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಗಿರಿಜನ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್ ಘೋಷಿಸಿದರು. ಸದಸ್ಯರಾದ ರಾಜೇಶ್, ಚಂದ್ರಪ್ರಭ, ಮಹೇಶ್, ಗೀತಾ, ಕಲ್ಯಾಣಮ್ಮ, ಮನು, ಎಂ.ಪ್ರೀತಿ, ನಂಜರಾಜ ಅರಸು, ಪವಿತ್ರ, ರಘು, ಇಂದ್ರಮ್ಮ, ಗ್ರಾಮದ ಮುಖಂಡರಾದ ಸ್ವಾಮಿಗೌಡ, ಮಾಯಿಗೌಡ, ಶಿವಣ್ಣ, ರವೀಂದ್ರೇಗೌಡ, ದೇವರಾಜು, ಸೋಮಸುಂದರ, ಪುಟ್ಟರಾಜು ಇತರರು ಹಾಜರಿದ್ದರು.