ಜಿಲ್ಲೆ

ಯುವಕನ ಮೇಲೆ ಪುಂಡರ ದಾಳಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿ ಯುವಕರ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಯಾಗಿದೆ. ಸೋಮಶೇಖರ್​ ಹಲ್ಲೆಗೆ ಒಳಗಾದವ. ನಾಹೀದ್​ ಹಲ್ಲೆ ಆರೋಪಿ.

ಸೋಮಶೇಖರ್​ ಪ್ರೀತಿಸುತ್ತಿದ್ದ ಯುವತಿ ಇತ್ತೀಚೆಗೆ ನಾಹೀದ್​ ಜತೆ ಗೆಳೆತನ ಬೆಳೆಸಿದ್ದಳು ಎನ್ನಲಾಗಿದೆ. ಈ ಬಗ್ಗೆ ಸೋಮಶೇಖರ್​, ಯುವತಿಯನ್ನು ಪ್ರಶ್ನಿಸಿದ್ದ. ಈ ವಿಷಯ ತಿಳಿದ ನಾಹೀದ್​ ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ

ಪ್ರಕರಣ ದಾಖಲಾಗಿದೆ.