ಜಿಲ್ಲೆ

ಕರ್ತವ್ಯನಿರತ ವೈದ್ಯರ ಮೇಲೆ ಪುಂಡರ ಹಲ್ಲೆ!

ಕೋಲಾರ ಡೆಸ್ಕ್

ಕೆಜಿಎಫ್​- ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಪುಂಡರು ಹಲ್ಲೆಗೆ ಮುಂದಾಗಿದ್ದು, ಕಳೆದ ವಾರದಲ್ಲಿ ಎರಡ್ಮೂರು ಬಾರಿ ಇಂಥ ಟನೆಗಳು ಮರುಕಳಿಸಿವೆ. ವೈದ್ಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಈಗ ವೈದ್ಯರು ಸರ್ಕಾರಿ ನೌಕರರ ಸಂದ ಮೊರೆ ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಫಿಜಿಷಿಯನ್​ ಡಾ.ರಚನ್​ ರಾಜ್​, ಡಾ.ಪರಿಮಳಾ, ಡಾ.ರಾಧಾ, ಡಾ.ಾತಿಮಾ, ಡಾ.ಸುರೇಶ್​ಕುಮಾರ್​ ನೊಂದ ವೈದ್ಯರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ 800 ರಿಂದ 1,200 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದ್ದು, ಸಹಜವಾಗಿಯೇ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಚಿಕಿತ್ಸೆಗೆ ಬರುವ ರೋಗಿಗಳು ಸ್ಥಿಮಿತ ಕಳೆದುಕೊಂಡು ಅವಾಚ್ಯವಾಗಿ ನಿಂದಿಸುವುದು, ಹಲ್ಲೆ ಮಾಡಲು ಮುಂದಾಗುವುದರಿಂದ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ.

ಕುಡುಕರ ಹಾವಳಿ ಮತ್ತು ಗಾಂಜಾ ಸೇವಿಸುವವರು ರಾತ್ರಿ ಹೆಚ್ಚಾಗಿ ಬರುತ್ತಿರುವುದರಿಂದ ಸಮಸ್ಯೆಯಾಗಿದೆ. ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲಿಸಿ ಹಲ್ಲೆ ಮಾಡಲು ಮುಂತಾದವರನ್ನು ಪತ್ತೆ ಹಚ್ಚಿ ಪೊಲೀಸರು ಕ್ರಮ ಕೈಗೊಳ್ಳಬೇಕು. ರಾತ್ರಿ ವೈದ್ಯರಿಗೆ ಪೊಲೀಸ್​ ಭದ್ರತೆ ಒದಗಿಸಬೇಕೆಂದು ವೈದ್ಯರು ಮನವಿ ಮಾಡಿದ್ದಾರೆ.

ರಾತ್ರಿಯೇ ಪಂಚನಾಮೆಗೆ ಒತ್ತಾಯ

ರಾತ್ರಿ ಸಂಭವಿಸಿದ ಘಟನೆಗಳಲ್ಲಿ ರೋಗಿಗಳು ಮೃತಪಟ್ಟರೆ, ರಾತ್ರಿಯೇ ಪಂಚನಾಮೆ ಮಾಡಿ ಮೃತದೇಹ ನೀಡುವಂತೆ ಪ್ರಭಾವಿಗಳಿಂದ ಒತ್ತಡ ಹೇರುತ್ತಾರೆ. ತುರ್ತು ನಿಗಾ ಘಟಕದಲ್ಲಿರುವ ಒಬ್ಬರು ವೈದ್ಯರು ರಾತ್ರಿ ಬರುವ ರೋಗಿಗಳನ್ನು ನೋಡಬೇಕಾ?, ಮೃತಪಟ್ಟಿರುವ ವ್ಯಕ್ತಿಯ ಪೋರ್ಸ್ಟ್​ಮಾರ್ಟಮ್​ ಮಾಡಬೇಕಾ? ಎಂದು ಡಾ.ಸುರೇಶ್​ಕುಮಾರ್​ ಪ್ರಶ್ನಿಸಿದ್ದಾರೆ.

ಮೂರು ತಿಂಗಳ ಹಿಂದೆ ಫಿಜಿಷಿಯನ್​ ಆಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ಕನಿಷ್ಠವೆಂದರೂ ತುರ್ತು ಸಂದರ್ಭಗಳಲ್ಲಿ 30 ರಿಂದ 40 ಜನರ ಪ್ರಾಣ ಉಳಿಸಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಪುಂಡನೊಬ್ಬ ಹಲ್ಲೆ ನಡೆಸಲು ಮುಂದಾಗಿರುವುದರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಭಯಪಡುವಂತಹ ವಾತಾವರಣ ನಿಮಾರ್ಣವಾಗಿದೆ-.

> ಡಾ.ರಚನ್​ ರಾಜ್​

ಫಿಜಿಷಿಯನ್​, ಸರ್ಕಾರಿ ಆಸ್ಪತ್ರೆ, ಕೆಜಿಎಫ್​

ಮಹಿಳಾ ವೈದ್ಯರು ಭಯದಿಂದ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ. ಆಸ್ಪತ್ರೆಗೆ ಒಬ್ಬ ಪೊಲೀಸರನ್ನು ನಿಯೋಜನೆ ಮಾಡಿದ್ದು, ಗಲಾಟೆಗಳಾದಾಗ ಅವರಿಂದ ಏನು ಮಾಡಲು ಸಾಧ್ಯ?, ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹಲ್ಲೆ ಮಾಡಲು ಬಂದಾಗ ನಾವು ರೋಗಿಗೆ ಚಿಕಿತ್ಸೆ ನೀಡಬೇಕಾ? ಇಲ್ಲ, ಪೊಲೀಸರಿಗೆ ದೂರು ನೀಡಬೇಕಾ?, ಪೊಲೀಸರೂ ಸಹ ಒಮ್ಮೊಮ್ಮೆ ಮೂಕ ಪ್ರೇಕ್ಷಕರಾಗಿ ನಿಂತಿರುತ್ತಾರೆ.

> ಡಾ.ಫತೀಮಾ

ಸರ್ಕಾರಿ ಆಸ್ಪತ್ರೆ ವೈದ್ಯೆ, ಕೆಜಿಎಫ್​

ವೈದ್ಯರ ಮೇಲೆ ಹಲ್ಲೆ ಮಾಡಿ ಮನೋಸ್ಥೆ$ರ್ಯ ಕುಗ್ಗಿಸಬಾರದು. ಈ ಸಂಬಂಧ ಎಸ್ಪಿ ಶಾಂತರಾಜು ಅವರಿಗೆ ದೂರು ನೀಡಲಾಗುವುದು. ಸಾರ್ವಜನಿಕರು ಶಾಂತತೆಯಿಂದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು.

> ನರಸಿಂಹಮೂರ್ತಿ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆಜಿಎಫ್​ ತಾಲೂಕು

ರೋಗಿಗಳು ಕಾರಣವಿಲ್ಲದೆ ದಾದಿಯರ ಮೇಲೆ ಹಲ್ಲೆ ನಡೆಸುವುದರಿಂದ ತುರ್ತು ನಿಗಾಘಟಕದಲ್ಲಿ ಕರ್ತವ್ಯ ನಿರ್ವಹಿಸಲು ದಾದಿಯರು ಮುಂದೆ ಬರುತ್ತಿಲ್ಲ.

- ಚಂದ್ರಿಕಾ

ಮೆಟ್ರಾನ್​