filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42; 
ಜಿಲ್ಲೆ

ಜಡ್ಜ್ ಮೇಲೆ ಶೂ ಎಸೆಯುವ ಕ್ರಮ ಸರಿಯಲ್ಲ

ಕಿರಣ್ ಗೌಡ.ಜಿ

ಕೊಳ್ಳೇಗಾಲ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾತನಾಡಿದ ಅವರು, ವಕೀಲರಿಗೆ ನ್ಯಾಯಾಲಯದ ಚೌಕಟ್ಟಿನಲ್ಲಿರುವ ಎಲ್ಲ ನಡಾವಳಿಗಳು ತಿಳಿದಿರುತ್ತದೆ. ಕಾನೂನಿನ ಬಗ್ಗೆ ಅರಿವಿರುತ್ತದೆ. ಆದರೆ, ರಾಕೇಶ್ ಕಿಶೋರ್ ಎಂಬ ವಕೀಲ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.

ನ್ಯಾಯಮೂರ್ತಿಗಳ ಮೇಲೆ ರಾಕೇಶ್ ಕಿಶೋರ್‌ಗೆ ಅಸಮಾಧಾನವಿದ್ದರೆ ನ್ಯಾಯಾಲಯ ಮೂಲಕವೇ ಪ್ರಶ್ನಿಸಬಹುದಿತ್ತು. ಆದರೆ ಶೂ ಎಸೆಯುವ ಪ್ರಯತ್ನ ನಡೆಸಿರುವುದು ಸರಿಯಾದ ಮಾರ್ಗವಲ್ಲ. ಈ ಕೃತ್ಯ ಸಮಾಜದಲ್ಲಿ ಅಶಾಂತಿ ಮತ್ತು ಹರಾಜಕತೆ ಸೃಷ್ಟಿಸುತ್ತದೆ. ಈಗಾಗಲೇ ಪ್ರಧಾನಿ ಮೋದಿ ಅವರು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ದೇಶಾದ್ಯಂತ ಮತ್ತು ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ತಪ್ಪಿತಸ್ಥನನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಎಂದು ಒತ್ತಾಯಿಸಿದರು.

ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ಅವರು ನ್ಯಾಯಮೂರ್ತಿಗಳಿಗೆ ಅಪಮಾನ ಮಾಡಿರುವ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಭಾಸ್ಕರ್ ಅವರ ಮೂರ್ಖತನ, ಅವಿವೇಕಿತನವಾಗಿದೆ. ಇದು ಕೂಡ ಕ್ಷಮಿಸಲಾಗದ ತಪ್ಪಾಗಿದ್ದು ಇಂತಹ ವಿಚಾರವನ್ನು ಸಮರ್ಥಿಸಿಕೊಂಡರೆ ಸಮಾಜದಲ್ಲಿ ಶಾಂತಿ ಕದಡುತ್ತದೆ. ಆದ್ದರಿಂದ ಭಾಸ್ಕರ್ ಅವರ ಮೇಲೂ ಕಾನೂನು ಕ್ರಮ ಆಗಬೇಕೆಂದು ಒತ್ತಾಯಿಸಿದರು.