ಜಿಲ್ಲೆ

ಓದಿನಿಂದ ಜೀವನದಲ್ಲಿ ಪ್ರಗತಿ ಸಾಧ್ಯ

ಸೋಮಲಿಂಗ ತಳವಾರ

ಖಾನಾಪುರ: ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದು ಅವಶ್ಯ. ಅವರು ನಿರಂತರವಾಗಿ ಓದಿನ ಕಡೆಗೆ ಗಮನ ಹರಿಸಿದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಮರಾಠಿ ಚಲನಚಿತ್ರ ನಟ ಪ್ರಸಾದ ಪಂಡಿತ ಹೇಳಿದರು.

ಪಟ್ಟಣದ ಶಾಂತಿನಿಕೇತನ ಪಬ್ಲಿಕ್​ ಸ್ಕೂಲ್​ ಮೆದಾನದಲ್ಲಿ ಶಾಸಕ ವಿಠ್ಠಲ ಹಲಗೇಕರ್​ ಜನ್ಮದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಕಷಿಮೇಳ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಓದು ಮನುಷ್ಯನ ಜೀವನಶೆಲಿ ಬದಲಾಯಿಸುತ್ತದೆ. ನಿರಂತರ ಓದು ಉತ್ತಮ ಭಾಷಣಕಾರನನ್ನಾಗಿ ಮಾಡಿದೆ. ಪಾಲಕರಿಗೆ ಗೌರವ ನೀಡಬೇಕು ಎಂದರು.

ಎಂಡಿ ಸದಾನಂದ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಪಂಡಿತ ಅವರನ್ನು ಸನ್ಮಾನಿಸಲಾಯಿತು. ಸಜನ್​ 2025 ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು. ಶಾಂತಿನಿಕೇತನ ಪಬ್ಲಿಕ್​ ಸ್ಕೂಲ್​ ನರ್ಸರಿಯಿಂದ ಐವಿ ಮತ್ತು ಪದವಿಪೂರ್ವ ಕಾಲೇಜಿನಿಂದ ಸ್ನೇಹ ಸಮ್ಮೇಳನ ನಡೆಯಿತು. ಶಾಲೆ ಕಾರ್ಯದರ್ಶಿ ಆರ್​.ಎಸ್​. ಪಾಟೀಲ, ಮಹಾಲಕ್ಷಿ$್ಮ ಬಳಗದ ಉಪಾಧ್ಯ ವಿಠ್ಠಲ ಕರಂಬಾಳ್ಕರ, ನಿರ್ದೇಶಕ ಚಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ಪ್ರಾಚಾಯೆರ್ ಸ್ವಾತಿ ಾಟಕ, ಸಂಗಪ್ಪ ನಿಲಸ್ಕರ್​, ಪ್ರಾಂಶುಪಾಲೆ ಸ್ವಾತಿ ಕಮಲ್​ ವಾಳವೆ, ಮಹಾಲಕ್ಷಿ$್ಮ ಸಮೂಹದ ಆಡಳಿತ ಮಂಡಳಿಯ ಶಾಂತಿನಿಕೇತನ ಶಾಲೆ ಶಿಕರು ಮತ್ತು ಸಿಬ್ಬಂದಿ ಇತರರಿದ್ದರು. ಮನೀಶಾ ಹಳಗೇಕರ ವಂದಿಸಿದರು.

ಕೃಷಿ ವಸ್ತುಪ್ರದರ್ಶನ ಸಂಪನ್ನ: ಸೋಮವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ಕಷಿ ವಸ್ತುಪ್ರದರ್ಶನ ಏರ್ಪಡಿಸಿದ್ದನ್ನು ತಾಲೂಕಿನ ಹಲವು ರೆತರು ಸದುಪಯೋಗಪಡಿಸಿಕೊಂಡರು. ಹಲವಾರು ಉಪನ್ಯಾಸಗಳು ದಿನವಿಡೀ ನಡೆದವು. ಮಂಗಳವಾರ ಮತ್ತು ಬುಧವಾರ ಸಂಜೆ ಸಾಂಸತಿಕ ಕಾರ್ಯಕ್ರಮ ನಡೆಯಿತು.