ಹನುಮಸಾಗರ:ನಿರಂತರ ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಹಾಗೂ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಕುದರಿಮೋತಿ ವಿಜಯಮಾಹಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕರಿಸಿದ್ಧೇಶ್ವರ ಮಠದ ಬಸವ ಭವನದಲ್ಲಿ ಪಿರಮಿಡ್ ಸ್ಪಿರುಚುವೆಲ್ ಸೋಸೈಟಿ, ಮೂವ್‌ಮೆಂಟ್(ಪಿಸ್‌ಎಸ್‌ಎಂ), ಎಸ್.ಎಸ್.ಕೆ. ಪಟೇಗಾರ ಗ್ರೂಪ್‌ವತಿಯಿಂದ ಬೆಂಗಳೂರಿನ ಲಲಿತಾ ಪವರ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡ ಹನುಮಸಾಗರ ಧ್ಯಾನ ಮಹಾಯಜ್ಞ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಧ್ಯಾನ ಮಾಡುವುದರಿಂದ ದೇವರನ್ನು ಒಲಿಸಿಕೊಳ್ಳಬಹುದು. ಧ್ಯಾನದಿಂದ ಎಲ್ಲ ಶರಣರು ದಿವ್ಯ ಶಕ್ತಿ ಪಡೆದುಕೊಂಡಿದ್ದಾರೆ ಎಂದರು.
ಧ್ಯಾನ ಮಾಸ್ಟರ್ ಲಲಿತಾ ಪವಾರ ಮಾತನಾಡಿ, ಧ್ಯಾನ ಮಾಡುವವರು ಯಾವಾಗಲೂ ಉಸಿರಿನ ಜೊತೆಗೆ ಸ್ವ ಅನುಭವ ಮಾಡಿಕೊಳ್ಳಬೇಕು. ಕೆಲವೊಬ್ಬರು ಅನೇಕ ರೀತಿಯ ಧ್ಯಾನಗಳನ್ನು ಮಾಡುತ್ತಾರೆ. ಅನಾಪಾನ ಸತಿ ಧ್ಯಾನ ಮಾಡುವವರು ಸುಜ್ಞಾನಿಗಳಾಗುತ್ತಾರೆ. ಧ್ಯಾನ ಮಾಡುವುದರಿಂದ ಹಲವಾರು ಜನರಿಗೆ ಕಾಯಿಲೆಗಳು ತಾನಾಗಿವೆ ಹೊಗಿವೆ. ನಿರಂತರ ಧ್ಯಾನ ಮಾಡುವುದರಿಂದ ಡಾಕ್ಟರ್ ಹತ್ತಿರ ಹೊಗುವ ಅವಶ್ಯಕತೆ ಇರುವುದಿಲ್ಲ. ಆರೋಗ್ಯವಾಗಿರಲು ಸಸ್ಯ ಆಹಾರ ಸೇವಿಸಬೇಕು. ಪ್ರಾರಂಭದಲ್ಲಿ ಧ್ಯಾನ ಮಾಡುವಾಗ ಅನೇಕ ಆಲೋಚನೆಗಳು ಬರುತ್ತವೆ. ನಂತರ ಮಾಯವಾಗುತ್ತವೆ. ಸಮಯಕ್ಕೆ ಬೆಲೆ ಕೊಡಬೇಕು ಸಮಯವನ್ನು ಹಾಳು ಮಾಡದೆ ನಿರಂತರ ಧ್ಯಾನ ಅಭ್ಯಾಸ ಮಾಡಬೇಕು ಎಂದರು.
ಹನುಮನಾಳ ಗ್ರಾಮದ ಕಲಾವಿದ ಗುರುನಾಥ ಪತ್ತಾರ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪತ್ರಿಕಟ್ಟಿ ಬಸವೇಶ್ವರ ತರುಣ ಸಂಘ, ನಿಸರ್ಗ ಸಂಗೀತ ಶಾಲೆ ಪದಾಧಿಕಾರಿಗಳು, ಮೇದಿಕೆರಿ ಆರ್ಟ ಗ್ಯಾಲರಿ, ಡಾ.ಪುಟ್ಟರಾಜ ಗಾನಯೋಗಿ ಭಜನಾ ಸಂಘ, ಶ್ರೀ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘ, ಶ್ರೀ ಅಕ್ಕಮಾಹಾದೇವಿ ಬಳಗ, ಆದಿತ್ಯ ಯೋಗ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಸ್ಥೆ, ಗುರು ಗಂಗಾಧರ ಸ್ವಾಮಿ ಸಂಗೀತ ಕಲಾ ಬಳಗ ಸೇರಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.