ಬೈಲಹೊಂಗಲ: ಮೂರುಸಾವಿರಮಠ ಅಧ್ಯಾತ್ಮದ ಕೇಂದ್ರವಾಗಿ ಬೆಳೆದು ನಾಡಿಗೆ ಮಾದರಿಯಾಗಿದೆ ಎಂದು ಹರಿಹರ ವೀರಶೆವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಸೂರ&ಬೆಲಹೊಂಗಲ ಮೂರುಸಾವಿರ ಮಠದ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ, ಲಿಂ.ಗಂಗಾಧರ ಸ್ವಾಮೀಜಿ 72ನೇ ಜಯಂತಿ ಮತ್ತು ಮಹಾಶಿವರಾತ್ರಿ ಉತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ನೀಲಕಂಠ ಪೂಜ್ಯರಿಂದ ಸ್ಥಾಪಿತವಾದ ಮಠವು ಜಾಗತ ನೆಲೆಯಾಗಿದೆ. ಲಿಂ.ಗಂಗಾಧರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರಭುನೀಲಕಂಠ ಪೂಜ್ಯರು ಆಯುರ್ವೇದ ಮಹಾವಿದ್ಯಾಲಯ, ಈಶಾ ಮಲ್ಟಿಸ್ಫೇಷಾಲಿಟಿ ಆಸ್ಪತ್ರೆ ಸೇರಿ ಅನೇಕ ಶಿಣ ಸಂಸ್ಥೆಗಳಿಂದ ಮಾನಸಿಕ, ದೆಹಿಕ, ಆರೋಗ್ಯ ಶಿಣ ನೀಡುತ್ತ ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾನೀಯ ಎಂದರು.
ಹುಬ್ಬಳ್ಳಿ&ಬೆಲಹೊಂಗಲ ರುದ್ರಾಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧರ್ಮದ ಹಾದಿಯಲ್ಲಿ ಸಾಗಿ ಸಂಪಾದನೆ ಮೂಲಕ ಸೇವೆ ಮಾಡುವುದು ಜೀವನದ ಉದ್ದೇಶ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಶ್ರೀಮಠವು ನಾಡಿನ ಶಾಂತಿಯ ತೋಟವಾಗಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ನಾಡನ್ನು ಉದ್ಧರಿಸುತ್ತಿದೆ ಎಂದರು.
ಜಾತ್ರಾ ಸ್ವಾಗತ ಸಮಿತಿ ಅಧ್ಯ ಶಿವರಂಜನ ಬೋಳನ್ನವರ, ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮಾತನಾಡಿದರು. ಶ್ರೀಮಠದ ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ನೇತತ್ವ ವಹಿಸಿದ್ದರು. ನೇಗಿಲಯೋಗಿ ರಾಜ್ಯ ರೆತ ಸಂದ ಅಧ್ಯ ರವಿ ಪಾಟೀಲ, ಜಿಲ್ಲಾಧ್ಯ ಶಂಕರ ಬೋಳನ್ನವರ ಇತರರು ಪ್ರಭುನೀಲಕಂಠ ಶ್ರೀಗಳನ್ನು ಸನ್ಮಾನಿಸಿದರು.
ದೊಡವಾಡ ಜಡಿಸಿದ್ದೇಶ್ವರ ಶಿವಾಚಾರ್ಯರು, ಮುತ್ನಾಳ ಶಿವಾನಂದ ಶಿವಾಚಾರ್ಯರು, ಹಳೇಕೋಟೆ ಸಿದ್ದಬಸವ ಸ್ವಾಮೀಜಿ, ಶಿವಾಪುರ ಅಡವಿಸಿದ್ದರಾಮ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೆಕುಂದರಗಿ, ಜಿಲ್ಲಾ ಸಹಕಾರ ಸಂಗಳ ಉಪನಿಬಂಧಕ ರವೀಂದ್ರ ಪಾಟೀಲ, ಹಿರಿಯರಾದ ಶಂಕರೆಪ್ಪ ಸಿದ್ನಾಳ, ಸಹಕಾರ ಸಂಗಳ ಸಹಾಯಕ ನಿಬಂಧಕಿ ಶಾಹಿನ್ ಅಖ್ತರ್, ಪುರಸಭೆ ಮಾಜಿ ಅಧ್ಯರಾದ ರಾಜು ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಮಾಜಿ ಉಪಾಧ್ಯ ಮಹಾಂತೇಶ ತುರಮರಿ, ಪ್ರಕಾಶ ಬಾಳೆಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಕಾಶೀನಾಥ ಬಿರಾದಾರ, ಶಂಕರೆಪ್ಪ ತಲ್ಲೂರ, ಕಾರ್ತಿಕ ಪಾಟೀಲ, ರಾಚಪ್ಪ ಬೋಳತ್ತಿನ, ಪ್ರಶಾಂತ ಜಕಾತಿ, ಪ್ರಾಚಾರ್ಯ ಎಂ.ಎಸ್. ಚಿಲಮೂರ, ಶ್ರೀಮಠದ ಎಸ್ಎನ್ವಿವಿಎಸ್ ಸಂಸ್ಥೆ ಉಪಾಧ್ಯ ಬಿ.ಎಸ್. ಗುರನವರ, ಕಾರ್ಯದರ್ಶಿ ಯು.ಕೆ. ಬಟಿಗೇರ, ನಿರ್ದೇಶಕರಾದ ಎಸ್.ಸಿ.ಮೆಟಗುಡ್ಡ, ವಿರೂಪಾಯ್ಯ ಕೋರಿಮಠ, ಶಿವಪ್ರಸಾದ ಹುಲೆಪ್ಪನವರಮಠ, ರಾಜೇಂದ್ರ ಹಿರೇಮಠ, ಬಿ.ಎಸ್. ಹೊಂಡೇದ, ಸಿ.ಎಸ್. ಕುಸಲಾಪುರ, ಸಿ.ಎಸ್. ಬಾಂವಿಹಾಳ, ಪರವಯ್ಯ ಪೂಜೇರ ಇತರರಿದ್ದರು.
ಮಹಾಶಿವರಾತ್ರಿ ವೆಭವಪೂರ್ಣವಾಗಿ ಆಯೋಜಿಸುತ್ತ ಬರಲಾಗಿದೆ. ನಾಡಿನ ಪೂಜ್ಯರ ಆಶೀರ್ವಾದ, ಭಕ್ತರ ಸಹಕಾರದಿಂದ ಶ್ರೀಮಠವು ಉತ್ಸುಂಗಕ್ಕೆ ಏರುತ್ತಿದೆ. ಬೆಂಗಳೂರಿನಲ್ಲಿ ನೀಲಕಂಠೇಶ್ವರ ಸಂಸ್ಥೆಯಿಂದ ಪಿಯು ಕಾಲೇಜ ಪ್ರಾರಂಭಿಸಲಾಗಿದೆ.
> ಪ್ರಭುನೀಲಕಂಠ ಸ್ವಾಮೀಜಿ