ಜಿಲ್ಲೆ

ಮೂವರು ಹೆಂಡತಿಯರು, 9 ಮಕ್ಕಳು: ಸಂಸಾರ ನಡೆಸಲು ಕಳ್ಳತನ, ಮಗನಿಗೆ ತಂದೆಯಿಂದಲೇ ಟ್ರೈನಿಂಗ್​​ | Bengaluru

Bengaluru: ಮೂವರು ಮಹಿಳೆಯರನ್ನು ಮದುವೆಯಾಗಿ ಒಂಬತ್ತು ಮಕ್ಕಳ ತಂದೆಯಾಗಿರುವ 35 ವರ್ಷದ ವ್ಯಕ್ತಿ ತನ್ನ 16 ವರ್ಷದ ಮಗನನ್ನು ಅಪರಾಧದಲ್ಲಿ ಪಾಲುದಾರನನ್ನಾಗಿ ಮಾಡಿಕೊಂಡು ಸರಣಿ ಕಳ್ಳತನ ಮಾಡಿದ್ದಕ್ಕಾಗಿ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಯಾವುದೇ ಒಂದು ನಿರ್ದಿಷ್ಟವಾದ ಕೆಲಸವನ್ನು ಹೊಂದಿರಲಿಲ್ಲ, ಜೊತೆಗೆ ಈತನು ಹೊಂದಿರುವ ಮೂರು ಕುಟುಂಬಗಳನ್ನು ಸಅಕಲು ಕಳ್ಳತನಕ್ಕೆ ಇಳಿದನು. ಅವನ ಮೂವರು ಹೆಂಡತಿಯರು ಶ್ರೀರಂಗಪಟ್ಟಣ, ಆನೇಕಲ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಅವನು ಇಷ್ಟಬಂದಂತೆ ಅವರನ್ನು ಭೇಟಿ ಮಾಡುತ್ತಿದ್ದನು. ಹೀಗಾಗಿ ಅವನ ಜೀವನಕ್ಕಾಗಿ ಕಳ್ಳತನ ಮಾಡಲು ಪ್ರಾರಂಭಿಸಿದನು ಮತ್ತು ಇತ್ತೀಚೆಗೆ ತನ್ನ ಹದಿಹರೆಯದ ಮಗನನ್ನು ಸಹ ತನ್ನೊಡನೆ ಕರೆದೊಯ್ದು ಕಳ್ಳತನದ ಬಗ್ಗೆ ತರಬೇತಿ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 7 ರಂದು ಬೆಟ್ಟದಾಸನಪುರದ 56 ವರ್ಷದ ರೋಜಮ್ಮ ಎಂಬ ಮಹಿಳೆಯ ಮನೆಯಿಂದ 4.6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದರು. ಅವರು ಬಟ್ಟೆ ಒಣಗಿಸಲು ಟೆರೇಸ್‌ಗೆ ಹೋಗಿದ್ದರು, ನೆಲಮಹಡಿಯ ಬಾಗಿಲು ತೆರೆದಿತ್ತು, ಇದರಿಂದಾಗಿ ಹುಡುಗನಿಗೆ ಚಿನ್ನ, ಬೆಳ್ಳಿ ಮತ್ತು ನಗದು ದೋಚಲು ಅವಕಾಶ ಸಿಕ್ಕಿತು.

ಮೇ 13 ರಂದು ಪೊಲೀಸ್​​ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಬಾಬಾಜಾನ್‌ನನ್ನು ಗುರುತಿಸಿ ಬಂಧಿಸಿದ್ದಾರೆ. ಅವನು ತನ್ನ ಮಗನಿಗೆ ಹಗಲಿನ ಕಳ್ಳತನಕ್ಕೆ ತರಬೇತಿ ನೀಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಬಾಬಾಜಾನ್ ಕಳೆದ ಎಂಟು ವರ್ಷಗಳಿಂದ ಕಳ್ಳತನದಲ್ಲಿ ಭಾಗಿಯಾಗಿದ್ದನು ಮತ್ತು ಬಾಗಿಲು ತೆರೆದಿರುವ ಅಥವಾ ನಿವಾಸಿಗಳಿಲ್ಲದ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

188 ಗ್ರಾಂ ಚಿನ್ನ, 550 ಗ್ರಾಂ ಬೆಳ್ಳಿ ಮತ್ತು ಇವರಿಬ್ಬರು ಭಾಗಿಯಾಗಿರುವ ಒಂಬತ್ತು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)