ನಿಪ್ಪಾಣಿ: ಸ್ಥಳೀಯ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ 6.60 ಲಕ್ಷ ರೂ. ಮೌಲ್ಯದ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಸುನೀಲ ರಾಜೇಂದ್ರ ಮುರಗುಡೆ (23), ಪೃಥ್ವಿ ಬಸವರಾಜ ಖೋತ (23), ಉದಯ ಮಹಾರುದ್ರ ಗಣಾಚಾರಿ (19) ಬಂಧಿತರು.
ಆರೋಪಿತರು ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ವಿವಿಧೆಡೆ ಬೈಕ್‌ಗಳನ್ನು ಕದ್ದು ತಾಲೂಕಿನ ಸೌಂದಲಗಾ ಗ್ರಾಮದಲ್ಲಿ ಬಚ್ಚಿಟ್ಟಿದ್ದರು.
ಜು.19ರಂದು ಪೊಲೀಸರು ವಿಶೇಷ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ತಾಲೂಕಿನ ಮಾಂಗೂರ ತಿರುವು ಬಳಿ ಮೂವರೂ ಆರೋಪಿತರು ಕಳವು ಮಾಡಿದ ಒಂದು ಬೈಕ್ ಮೇಲೆ ಹೊರಟಿದ್ದಾಗ ವಿಚಾರಣೆಗೊಳಪಡಿಸಿ ಬೈಕ್ ವಶಪಡಿಸಿಕೊಂಡರು.
ಎಸ್ಪಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ಶ್ರುತಿ ಕೆ., ಬಸನಗೌಡ ಬಸರಗಿ, ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣೆ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಪಿಎಸ್‌ಐ ಶಿವರಾಜ ನಾಯಿಕವಾಡಿ, ಎಎಸ್‌ಐ ಎಸ್.ಎ. ತೊಲಗಿ, ಎಸ್.ಎಸ್. ಕಾಡಗೌಡರ, ಆರ್.ಆರ್. ಪಾಟೀಲ, ಎಂ.ಎಫ್. ನದ್ಾ, ಎ.ವಿ. ಚಂದನಶಿವ, ರಾಘವೇಂದ್ರ ಮೇಲ್ಗಡೆ, ಪಿ.ಎಲ್. ಕುದರಿ, ಪಿ.ಟಿ. ಸಿದ್ದಾಟಗಿಮಠ, ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ವಿನೋದ ಟಕ್ಕನ್ನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.