ಬೆಂಗಳೂರು: ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯಪ್ಪನಹಳ್ಳಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ವಾರ್ಷಿಕ ಕೇಬಲ್ ಮೇಗರಿಂಗ್ ನಿರ್ವಹಣೆ ಕಾಮಗಾರಿ ಆರಂಭವಾಗುವ ಹಿನ್ನೆಲೆ ಬುಧವಾರ (ಮೇ 29) ಮೂರು ಮೆಮು ರೈಲುಗಳು ರದ್ದುಗೊಳ್ಳಲಿದ್ದು, ಎಂಟು ಮೆಮು ರೈಲುಗಳು ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ವೈಟ್ಫೀಲ್ಡ್-ಕೆಎಸ್ಆರ್ ಬೆಂಗಳೂರು (ಸಂಖ್ಯೆ 01766), ಕೆಎಸ್ಆರ್ ಬೆಂಗಳೂರು-ವೈಟ್ಫೀಲ್ಡ್ (ಸಂಖ್ಯೆ 06561) ಮತ್ತು ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು (ಸಂಖ್ಯೆ 01773) ಮೂರು ವಿಶೇಷ ಮೆಮು ರೈಲುಗಳು ಬುಧವಾರ ತಾತ್ಕಾಲಿಕವಾಗಿ ರದ್ದಾಗಲಿದೆ.
ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ (ಸಂಖ್ಯೆ 06389) ವಿಶೇಷ ಮೆಮು ರೈಲು ಕೆಎಸ್ಆರ್ ಬೆಂಗಳೂರು-ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ, ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ರೈಲು (ಸಂಖ್ಯೆ 06535/06536) ವಿಶೇಷ ಮೆಮು ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ, ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ (ಸಂಖ್ಯೆ 01776/01775) ವಿಶೇಷ ಮೆಮು ರೈಲು ಕೃಷ್ಣರಾಜಪುರಂ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಮಾರಿಕುಪ್ಪಂ-ಕೃಷ್ಣರಾಜಪುರಂ-ಮಾರಿಕುಪ್ಪಂ (ಸಂಖ್ಯೆ 01793/01794) ವಿಶೇಷ ಮೆಮು ರೈಲು ಬಂಗಾರಪೇಟೆ-ಕೃಷ್ಣರಾಜಪುರಂ ನಡುವೆ, ಕೆಎಸ್ಆರ್ ಬೆಂಗಳೂರು-ಕುಪ್ಪಂ (ಸಂಖ್ಯೆ 06529) ವಿಶೇಷ ಮೆಮು ರೈಲು ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ರದ್ದಾಗುವ ಸಾಧ್ಯತೆಯಿದೆ.