ಜಿಲ್ಲೆ

ಸರ್ಕಾರಿ ಕಚೇರಿ ಆವರಣದಲ್ಲಿದ್ದ 3 ಶ್ರೀಗಂಧದ ಮರಗಳ ಕಳ್ಳತನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಸಿಟಿ ಸರ್ವೇ ಕಚೇರಿಯ ಆವರಣದಲ್ಲಿದ್ದ ಮೂರು ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಹಳಿಯಾಳ ನಾಕಾ ಪ್ರದೇಶದಲ್ಲಿರುವ ಸಿಟಿ ಸರ್ವೇ ಕಚೇರಿಯ ಆವರಣಕ್ಕೆ ಕನ್ನ ಹಾಕಿದ ಕಳ್ಳರು, ಶುಕ್ರವಾರ ಬೆಳಗಿನ ಜಾವ ಮೂರು ಮರಗಳನ್ನು ಕತ್ತರಿಸಿ ಒಯ್ದಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.