ಹುಬ್ಬಳ್ಳಿ: ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಹುಬ್ಬಳ್ಳಿ ಹಾಗೂ ಧಾರವಾಡ ವ್ಯಾಪ್ತಿಯ ಮೂವರು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಿ ಹು-ಧಾ ಪೊಲೀಸ್ ಆಯುಕ್ತಾಲಯ ಆದೇಶ ಹೊರಡಿಸಿದೆ.
ಕಸಬಾಪೇಟೆ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಟಿಪ್ಪುನಗರದ ನಿವಾಸಿ ಫಯಾಜಹ್ಮದ ಮಹ್ಮದಲಿ ಹತ್ತಿವಾಲೆ (30) ಎಂಬಾತನನ್ನು 6 ತಿಂಗಳ ಅವಧಿಗೆ ಹಾಸನ ಜಿಲ್ಲೆಯ ಹಾಸನ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಬೆಂಡಿಗೇರಿ ಠಾಣೆಯ ರೌಡಿಶೀಟರ್ ಹುಬ್ಬಳ್ಳಿ ಸೆಟ್ಲಮೆಂಟ್‌ನ ಶಾಂತಿನಗರ ಕಾಲನಿ ನಿವಾಸಿ ಲಕ್ಷಣ ಅಲಿಯಾಸ್ ಲಕ್ಯಾ ಗಬ್ಬಿ ಪರಶುರಾಮ ಬಳ್ಳಾರಿ ಎಂಬಾತನನ್ನು (30) 6 ತಿಂಗಳ ಅವಧಿಗೆ ರಾಯಚೂರು ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆಯ ರೌಡಿಶೀಟರ್ ಕೋಳಿಕೇರಿ ನಿವಾಸಿ ಫಕ್ಕೀರಪ್ಪ ಪ್ರಕಾಶ ಬಸವರಾಜ ಹಳ್ಯಾಳ (29) ಎಂಬಾತನನ್ನು 6 ತಿಂಗಳ ಅವಧಿಗೆ ಶಿವಮೊಗ್ಗ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.