ಕೃಷ್ಣಗಿರಿ ಜಿಲ್ಲೆ ರಾಜಗಣಪತಿ ನಗರದ ಅರ್ಜುನ್​ಕೊಲೆಯಾಗಿರುವ ಜಾಗ ಪರಿಶೀಲಿಸಿದ ಪೊಲೀಸರು. 
ಜಿಲ್ಲೆ

ಮೂವರು ಕೊಲೆ ಆರೋಪಿಗಳ ಬಂಧನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸೂರು : ಕಳೆದ 25 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹೊಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೇಂಟರ್​ ಕೆಲಸ ಮಾಡುತ್ತಿದ್ದ ಕೃಷ್ಣಗಿರಿ ಜಿಲ್ಲೆ ರಾಜಗಣಪತಿ ನಗರದ ಅರ್ಜುನ್​(23) ಕೊಲೆಯಾಗಿದ್ದು, ಪ್ರಕರಣದಲ್ಲಿ ರಾಮ್​ನಗರದ ಸಕುಲ್​ ಅಮೀದ್​, ಪವನ್​ ಪ್ರಕಾಶ್​ ಹಾಗೂ ಸೈಬು ಎಂಬುವರನ್ನು ಬಂಧಿಸಲಾಗಿದೆ.

ಹಣದ ವಿಚಾರಕ್ಕೆ ಅರ್ಜುನ್​ ಹಾಗೂ ಆರೋಪಿಗಳ ನಡುವೆ ದ್ವೇಷ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಅರ್ಜುನ್​ನನ್ನು ಅಪಹರಿಸಿದ ಆರೋಪಿಗಳು ಚಿನ್ನಾರು ಬದಿಯಲ್ಲಿರುವ ಶೂಲಗಿರಿ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಶವವನ್ನು ಹೂತಿದ್ದರು. ಆರೋಪಿಗಳ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀೆಗೆ ಕಳುಹಿಸಿದ್ದಾರೆ.

ಕೊಲೆ ಸಂಚು: ಸಕುಲ್​ ಅಮೀದ್​ ಮತ್ತು ಸೂಪಿ ಎಂಬುವರು ಗೆಳೆಯರಾಗಿದ್ದರು. ಸೂಫಿ ಮೃತ ಅರ್ಜುನನ ಸ್ನೇಹಿತನಾಗಿದ್ದ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು, ಈ ಬಗ್ಗೆ ಸೂಫಿ ಗೆಳೆಯ ಅರ್ಜುನನಿಗೆ ಮಾಹಿತಿ ನೀಡಿದ್ದ. ಈ ವೇಳೆ ಸಕುಲ್​ ಅಮೀದ್​ ಹಾಗೂ ಅರ್ಜುನನ ನಡುವೆ ಜಗಳವಾಗಿತ್ತು. ಇದರಿಂದ ಕುಪಿತನಾದ ಸಕುಲ್​ ಅಮೀದ್​ ಸಹಚರರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.