ಹಾರೋಹಳ್ಳಿ : ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಅಪಹರಣಕಾರರನ್ನು ಬಂಧಿಸುವಲ್ಲಿ ಕಗ್ಗಲಿಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಸಪ್ತಗಿರಿ ನಗರ ಹೊಸಕೆರೆಹಳ್ಳಿಯ ನರಸಿಂಹ (36), ವಜ್ರ (32), ಬೆಂಗಳೂರು ಕೋರಮಂಗಲದ ಕೆಎಸ್‌ಆರ್‌ಟಿಸಿ ಕ್ವಾಟ್ರಸ್ ಬಳಿಯ ಮನೋಹರ (30) ಬಂಧಿತರು. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಕಾರು, ಎರಡು ಚಾಕು, ಒಂದು ಮುಚ್ಚು ಹಾಗೂ 39 ಸಾವಿರ ಹಣ ಜಪ್ತಿ ಮಾಡಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕೆರೆ ಚೂಡಳ್ಳಿ ನಿವಾಸಿ ರಾಜಶೇಖರ್ ಎಂಬುವವರನ್ನು ಅಪಹರಿಸಿದ್ದಾರೆಂದು ಪತ್ನಿ ಕವಿತಾ ಕಗ್ಗಲಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಾಮನಗರ ಎಸ್ಪಿ ಆರ್. ಶ್ರೀನಿವಾಸ್ ಗೌಡ, ಅಪರ ಎಎಸ್‌ಪಿಗಳಾದ ಸುರೇಶ್ ಟಿವಿ ಮತ್ತು ರಾಮಚಂದ್ರಯ್ಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶ್ರೀನಿವಾಸ್, ಆರಕ್ಷಕ ನಿರೀಕ್ಷಕರಾದ ವೆಂಕಟೇಶ್ ನೇತೃತ್ವದ ತಂಡದ ಪಿಎಸ್‌ಐ ಲೋಕೇಶ್, ಸಿಬ್ಬಂದಿ ಸರಸ್ವತಮ್ಮ, ಮೊಡೆಪ್ಪ, ನಾಗರಾಜು, ಅನಿಲ್ ಕುಮಾರ್, ಮಂಜುನಾಥ್ ಮುರಳೀಧರ್ ಇತರರು ಕಾರ್ಯಾಚರಣೆ ನಡೆಸಿದ್ದರು.