ಸಿದ್ದಾಪುರ: ಗಾಳಿಮಳೆಯಿಂದಾಗಿ ತಾಲೂಕಿನ ನೆಜ್ಜೂರಿನ ಅಮಜದ್ ಖಾನ್ ಎಂಬುವರ ಮನೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರಿಗೆ ಪೆಟ್ಟುಬಿದ್ದಿದ್ದು ಸ್ಥಳಕ್ಕೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.
ಖಲೀಲ್ ಮೈದಿನ್ ಖಾನ್ (63) ಇವರಿಗೆ ಪೆಟ್ಟು ಬಿದ್ದು ಸಾಗರ ಸರ್ಕಾರಿ ಆಸ್ಪತ್ರೆಗೆ, ಅಯಾನ್ ಅಮಜದ್ ಖಾನ್(11)ನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಅಯೂಬ್ ಅಮಜದ್ ಖಾನ್(9)ನನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ದೇವಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಕಿದ್ದ ತಗಡಿನ ಶೀಟ್ ಭಾರೀ ಮಳೆಗಾಳಿಗೆ ಹಾರಿ ಹೋಗಿ ಹಾನಿ ಸಂಭವಿಸಿದೆ.
ಶಾಲಾ ಕಟ್ಟಡದ ಸ್ಲಾ್ಯಬ್ ಸೋರುತ್ತಿದ್ದರಿಂದ ಸಿಮೆಂಟ್ ಶೀಟ್ ಅಳವಡಿಸಿದ್ದು ಅದು ಈಗ ಗಾಳಿಗೆ ಹಾರಿ ಹೋಗಿದ್ದರಿಂದ ಕೊಠಡಿಯೊಳಗೆ ನೀರು ತುಂಬಿಕೊಂಡಿದೆ. ಇದರಿಂದ ತರಗತಿಯನ್ನು ನಡೆಸುವುದು ಕಷ್ಟವಾಗಿದ್ದು ಕೂಡಲೇ ಸಂಬಂಧ ಪಟ್ಟ ಇಲಾಖೆ ಮೇಲ್ಛಾವಣಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಎಸ್ಡಿಎಂಸಿ ಅಧ್ಯಕ್ಷ ಗಿರೀಶ ಹೆಗಡೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.