ಜಿಲ್ಲೆ

ಜ್ಯೋತಿಗೆ ಮೂರು ಪ್ರಥಮ ಸ್ಥಾನ

ಆದರ್ಶ್. ಎಂ.ಕೆ.

ಮಡಿಕೇರಿ: ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಶೆಟಲ್ ಬ್ಯಾಡ್ಮಿಂಟನ್ ನ್ಯಾಷನಲ್ ಮಾಸ್ಟರ್ಸ್ ಒಪನ್ ಟೂರ್ನಮೆಂಟ್‌ನಲ್ಲಿ ಮೂರು ಪ್ರಥಮ ಸ್ಥಾನ ಪಡೆಯುವುದರ ಮೂಲಕ ಹಿರಿಯ ಪ್ರಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ವಿಶೇಷ ಸಾಧನೆ ಮಾಡಿದ್ದಾರೆ.


ಸಿಂಗ್ಸಲ್, ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಡಬಲ್ಸ್‌ನಲ್ಲಿ ಬೆಂಗಳೂರಿನ ಮೇರಿ ಪಡಿವಾಲ್ ಹಾಗೂ ಮಿಕ್ಸೆಡ್ ಡಬ್ಸಲ್‌ನಲ್ಲಿ ಮಂಗಳೂರಿನ ಡಾ.ಕಿಶೋರ್ ಜೋಡಿಯಾಗಿದ್ದರು.


ಜನರಲ್ ಕೆ.ಎಸ್.ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜ್ಯೋತಿ ಸೋಮಯ್ಯ ವಿದ್ಯಾರ್ಥಿಗಳಿಗೆ ನಿತ್ಯ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ಆಯೋಜಿಸಿರುವ ಹಿರಿಯರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಕಪ್ ಗೆದ್ದಿದ್ದಾರೆ.