ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಏರ್ಪಡಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ (ಐಸಿಟಿಐಇಇ) ಮಂಗಳವಾರ ಚಾಲನೆ ನೀಡಲಾಯಿತು.
ಐಯುಸಿಇಇ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣಾ ವೇದುಲ ಮಾತನಾಡಿ, ಇಂಜಿನಿಯರಿಂಗ್ ಕಾಲೇಜುಗಳು ಪರಿಣಾಮಕಾರಿ ಕಲಿಕೆಗೆ ಜಾಗತಿಕ ಮಟ್ಟದ ಸಂಸ್ಥೆಗಳ ಸಹಯೋಗ ಪಡೆಯಬೇಕು. ವಿದ್ಯಾರ್ಥಿ ಕೇಂದ್ರಿತ ಕಲಿಕೆ ಆದ್ಯತೆ ನೀಡಬೇಕು. ಕಾಲೇಜುಗಳ ಕ್ಯಾಂಪಸ್ನಲ್ಲಿ ಉತ್ತಮ ವಾತಾವರಣ ಸೃಷ್ಟಿಸಿರಬೇಕು ಎಂದರು.
ಯುಎಸ್ಎ ಕ್ಯಾಲಿಫೋರ್ನಿಯಾ ವಿವಿಯ ಪ್ರೊ. ಎಸ್.ಕೆ. ರಮೇಶ ಮಾತನಾಡಿ, ವಿದ್ಯಾಥಿರ್ಗಳ ಹಿತವನ್ನು ಗಮದಲ್ಲಿಟ್ಟುಕೊಂಡು ಕಾಲೇಜುಗಳು ಕಲಿಕೆ ಮಹತ್ವ ನೀಡಬೇಕು. ಭವಿಷ್ಯದ ಇಂಜಿನಿಯರ್ಗಳನ್ನು ಸೃಷ್ಟಿಸಲು ವಿದ್ಯಾಥಿರ್ಗಳ ಕಾಳಜಿಯ ಜತೆಗೆ ತತ್ವ ಸಿದ್ಧಾಂತ, ನೈತಿಕತೆ ಆಧಾರದಲ್ಲಿ ಶಿಕ್ಷಣ ಇರಬೇಕು ಎಂದು ಸಲಹೆ ನೀಡಿದರು.
ಎಬಿಇಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಚೆಲ್ ಮಿಲಿಗನ್, ಸೊಲ್ಲಾಪುರದ ಎಂಐಟಿ ಕುಲಪತಿ ಡಾ. ಗೋಪಾಲಕೃಷ್ಣ ಜೋಶಿ, ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಿ.ಎಸ್. ಅನಾಮಿ, ಡಾ. ವಿಜಯಲಕ್ಷ್ಮಿ ಎಂ., ಸಂಪದಾ ಪಚೌರಿ, ಇತರರು ಉಪಸ್ಥಿತರಿದ್ದರು.
ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಸ್ವಾಗತಿಸಿದರು. ಡೀನ್ ಡಾ. ಪ್ರಕಾಶ ತೆವರಿ ವಂದಿಸಿದರು.
ಆದಿತ್ಯ ಭಟ್ನಾಗರ, ಡಾ. ಕಲ್ಯಾಣ ರಾಮ್, ಡಾ. ಪ್ರತಿಭಾ ನಾಗಭೂಷಣ, ಶಾಲಿನಿ ಶರ್ಮಾ ಹಾಗೂ ವಿವಿಧ ದೇಶಗಳ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.