ದೇವನಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಹರ್ರ್ ತಿರಂಗಾ ಮೂಲಕ ಮನೆಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಿ ಪ್ರತಿಯೊಬ್ಬರಲ್ಲೂ ದೇಶ ಪ್ರೇಮ ತುಂಬಿ ಸ್ವಾತಂತ್ರ$್ಯ ದಿನವನ್ನು ದೊಡ್ಡಹಬ್ಬವಾಗಿ ಆಚರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ, ರಾಬಂಧನ ಹಾಗೂ ವರಮಹಾಲ್ಮ ಪೂಜೆಯಲ್ಲಿ ಮಾತನಾಡಿದರು. ಜಿಲ್ಲೆಯಾದ್ಯಂತ ಹರ್ ಗರ್ ತಿರಂಗಾಯಾತ್ರೆ ಯಶಸ್ವಿಗೊಳಿಸಲು ನಾಲ್ಕೂ ತಾಲೂಕುಗಳಲ್ಲಿ ಸಮಿತಿ ರಚಿಸಲಾಗಿದೆ. ಅದರ ಉಸ್ತುವಾರಿಯನ್ನು ಬುಳ್ಳಹಳ್ಳಿ ಎಂ.ರಾಜಪ್ಪ ಹಾಗೂ ಶಾನಪನಹಳ್ಳಿ ರವಿ ವಹಿಸಿಕೊಂಡು ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಸ್ಥಾನಮಾನದ ಜತೆಗೆ ಪಕ್ಷ ಸಂಟನೆಗೂ ಆದ್ಯತೆ ನೀಡಬೇಕು. ಎಲ್ಲ ಜಾತಿ ಜನಾಂಗವನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಟಿಸಬೇಕು ಎಂದರು. ಎಸ್.ಸಿ ಮೋರ್ಚಾ ಅಧ್ಯಕ್ಷ ಬುಳ್ಳಹಳ್ಳಿ ಎಂ.ರಾಜಪ್ಪ ಮಾತನಾಡಿ, ಆ.12 ರಿಂದ 15ರವೆಗೂ ಬಿಜೆಪಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 13ರಂದು ಅಂಬರೀಶಗೌಡ ಸಾರಥ್ಯದಲ್ಲಿ ಕತ್ತಿ ಮಾರಮ್ಮ ದೇವಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.
ನಕಲಿ ಮತದಾನ ಆಗಿದೆ ಎಂದು ಸುಳ್ಳು ಆರೋಪ ಮಾಡಿ ರಾಹುಲ್ಗಾಂಧಿ ಬೆಂಗಳೂರಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆ ರೀತಿ ಮಾಡಿದ್ದರೆ ರಾಜ್ಯದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುತ್ತಿತ್ತು. ಹಾಗಾದರೆ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂದಿದೆ?. ಅಂದರೆ ಕಾಂಗ್ರೆಸ್ನವರೂ ನಕಲಿ ಮತದಾನ ಮಾಡಿಸಿರಬಹುದು. ಕಾಂಗ್ರೆಸ್ ಶಾಸಕರು ಗೆದ್ದ ಮತದಾರರ ಪಟ್ಟಿ ಪರಿಶೀಲಿಸಲಿ. ಆಗ ನಕಲಿ ಮತದಾರರು ಯಾವ ಪಕ್ಷದ ಪರವಾಗಿ ಯಾವ ೇತ್ರದಲ್ಲಿ, ನಕಲಿ ವೋಟರ್ಸ್ ಎಷ್ಟಿದ್ದಾರೆ ಎಂಬುದು ತಿಳಿದು ಬರಲಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಹೇಳಿದರು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.