CHANNABASA 
ಜಿಲ್ಲೆ

ಏ.೦೪ರಿಂದ ಮೂರು ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮ

ರಾಯಚೂರು ಎಐಡಿವೈಓ ಸಂಘಟನೆ ಸೇರಿದಂತೆ ವಿವಿಧ ಸಂಘಗಳ ನೇತೃತ್ವದಲ್ಲಿ ಏ.೪ ರಿಂದ ೬ವರೆಗೆ ರಾಯಚೂರು ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಾಟಕ,ನೃತ್ಯ, ಸಂವಾದ, ಸಿನಿಮಾ ವೀಕ್ಷಣೆ, ಕವಿಗೋಷ್ಟಿಗಳು ನಡೆಯಲಿವೆ ಎಂದು ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಡಿವೈಓ, ಎಐಡಿಎಸ್‌ಓ, ಮಹಿಳಾ ಸಾಂಸ್ಕೃತಿಕ ಸಂಘಟನೆ, ಪಂಡಿತ ತಾರಾನಾತಸಾಂಸ್ಕೃತಿಕ ವೇದಿಗಳ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಏ.೦೪ರಂದು ಸಂಜೆ ನಗರದ ಕರ್ನಾಟಕ ಸಂಘಟದಲ್ಲಿ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಉದ್ಘಾಟಿಸಲಿದ್ದಾರೆ. ನಂತರ ಮಹಿಳಾ ಸಮಾಜದಿಂದ ಕರ್ನಾಟಕ ಸಂಘದವರೆಗೆ ಕಲಾ ಜಾಥಾ ನಡೆಯಲಿದೆ.

ನಂತರ ಮಹಿಳಾ ಸಮಾಜದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ನೃತ್ಯ,ಮೈಮೋ ಶೋ, ಹಾಡು, ರಘುನಾಥ ಪೂಜಾರ ಇವರಿಂದ ಕ್ಲಾರಿಯೋನೆಟ್ ವಾದನ ನಡೆಯಲಿದೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯರೂಪಕ ಪ್ರದರ್ಶನವಾಗಲಿದೆ.

ಏ.೫ರಂದು ಎಸ್‌ಕೆಇ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಪೌರ ಕಾರ್ಮಿಕರ ಜೀವನ ಆಧಾರಿಸಿದ ಸಿನಿಮಾ ಅಮರಾವತಿ ಪ್ರದರ್ಶನವಾಗಲಿದೆ. ಅತಿಥಿಗಳಾಗಿ ಪತ್ರಕರ್ತ ಮನೋಜಕುಮಾರ ಗುದ್ದಿ ಆಗಮಿಸಲಿದ್ದಾರೆ.

ಅಧ್ಯಕ್ಷಯತೆಯನ್ನು ಹಯ್ಯಾಳಪ್ಪ ವಹಿಸಿಕೊಳ್ಳಲಿದ್ದಾರೆ.

ಏ.೬ ರಂದು ಬೆಳಿಗ್ಗೆ ಸರ್ಕಾರಿ ನೌಕರರ ಸಭಾಭವನದಲ್ಲಿ ಯುವ ಕವಿಗೋಷ್ಟಿ ನಡೆಯಲಿದ್ದು, ಹಿರಿಯ ಉಪನ್ಯಾಸಕ ಗೋಪಾಲ್ ನಾಯಕ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕವಿ ಕೋರೆನಲ್ ವಹಿಸಿಕೊಳ್ಳಲಿದ್ದಾರೆ. ಅಂದು ಸಂಜೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಕಸಾಪ ನಿಕಟಪೂರ್ವ ಅಧ್ಯಕ್ಷ ಮಾಹಾಂತೇಶ ಮಸ್ಕಿ ಭಾಗವಹಿಸಲಿದ್ದಾರೆ. ಶಿಕ್ಷಕಿ ಮಂಜುಳಾ ನಿರ್ದೇಶನದಲ್ಲಿ ಮಾನ್ವಿ ವಿದ್ಯಾರ್ಥಿಗಳಿಂದ ಮೊಬೈಲ್ ಮಾಯೆ ಕಿರು ನಾಟಕ ಪ್ರದರ್ಶನವಾಗಲಿದೆ. ಬೆಂಗಳೂರಿನ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಿAದ ಓ ಹೆನ್ರಿಯವರ ಕಥೆ ಆಧಾರಿತ ಕೊಲೆ ಎಲೆ ನಾಟಕ ಪ್ರದರ್ಶನವಾಗುತ್ತದೆ. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವಕ ಯುವತಿಯರು ತೊಡಗಿಸಿಕೊಳ್ಳಲುಪ್ರೇರಣೆಯಾಗಿ ಜನೋತ್ಸವ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾಧ್ಯಕ್ಷ ಹಯ್ಯಾಳಪ್ಪ, ವಿನೋದಕುಮಾರ, ಸರೋಜ ಇದ್ದರು.