Three copper pots stolen 
ಜಿಲ್ಲೆ

ಮೂರು ತಾಮ್ರದ ಹಂಡೆ ಕಳ್ಳತನ

Vijayapura - Desk - Doddanagouda Gudihindin

ಗುಳೇದಗುಡ್ಡ: ತಾಲೂಕಿನ ಆಸಂಗಿ ಗ್ರಾಮದ ಮನೆಗಳ ಮುಂದೆ ಇಟ್ಟಿದ್ದ ತಾಮ್ರದ ಹಂಡೆಗಳು ಗುರುವಾರ ಬೆಳಗಿನ ಜಾವ ಕಳ್ಳತನವಾಗಿವೆ.

ಮಲ್ಲಪ್ಪ ಭಗವತಿ, ದ್ಯಾವಪ್ಪ ಬಗಲಿ ಮತ್ತು ಬಾಲಪ್ಪ ಬಗಲಿ ಅವರ ಮನೆ ಮುಂದೆ ಇಡಲಾಗಿದ್ದ ತಾಮ್ರದ ಮೂರು ಹಂಡೆಗಳನ್ನು ವ್ಯಕ್ತಿ ಓರ್ವ ಚಿಕ್ಕ ವಾಹನದಲ್ಲಿ ಬಂದು ಕದ್ದಿದ್ದಾನೆ. ಕಟ್ಟೆ ಮೇಲೆ ಇಟ್ಟಿದ್ದ ದೊಡ್ಡ ಹಂಡೆಗಳಲ್ಲಿನ ನೀರು ಚೆಲ್ಲಿ ದೋಚಿಕೊಂಡು ಪರಾರಿಯಾಗಿರುವ ದೃಶ್ಯ ಆಸಂಗಿ ಗ್ರಾಮದ ಮಲ್ಲಪ್ಪ ಭಗವತಿ ಅವರ ಮನೆ ಮುಂದೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಥಳೀಯ ದೂರು ದಾಖಲಾಗಿಲ್ಲ. ಸ್ವಯಂಪ್ರೇರಿತವಾಗಿ ತನಿಖೆ ಕೈಗೊಂಡಿರುವುದಾಗಿ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ತಿಳಿಸಿದ್ದ