ಜಿಲ್ಲೆ

ಮೂವರು ಪೇದೆಗಳು ಅಮಾನತು: ಕರ್ತವ್ಯಲೋಪವೆಸಗಿದ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ಕರ್ತವ್ಯ ಲೋಪ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಮೂವರು ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಕೆ.ಆರ್.ಸಾಗರ ಪೊಲೀಸ್ ಠಾಣೆಯ ಮುಖ್ಯಪೇದೆ ಪುರುಷೋತ್ತಮ, ಪೇದೆಗಳಾದ ಅನಿಲ್ ಕುಮಾರ್, ಪ್ರಭುಸ್ವಾಮಿ ಅಮಾನತಾಗಿದ್ದಾರೆ. ಈ ಮೂವರು ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದರೆನ್ನುವ ಆರೋಪ ಕೇಳಿಬಂದಿದೆ.