ರಾಯಚೂರು ಒಳಮೀಸಲಾತಿ ವರ್ಗಿಕರಣದ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಈ ಮೂರು ಸಮುದಾಯದಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಒಂದು ವಾರದಲ್ಲಿ ಶಿಫಾರಸ್ಸು ಮಾಡಬೇಕು ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶಿವರಾಯ ಅಕ್ಕರಕಿ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರು ತಮ್ಮ ಮೂಲ ಜಾತಿ,ಪ್ರಮಾಣಪತ್ರ ಪಡೆದುಕೊಂಡು ಪ್ರವರ್ಗ-ಎ ಅಥವಾ ಪ್ರವರ್ಗ- ಬಿ ಗಳಲ್ಲಿ ಮೀಸಲಾತಿ ಹಂಚಿಕೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಸಲ್ಲಿಸಿದ್ದು, ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.
ರಾಜ್ಯ ಸರ್ಕಾರ ಹೊರಡಿಸಿದ ಎರಡನೇ ಆದೇಶದಲ್ಲಿ 7 ಶಿಫಾರಸ್ಸು ಹೊರಡಿಸಿದೆ. ಅದರಲ್ಲಿ 2ನೇ ಶಿಫಾರಸ್ಸು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.2ನೇ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಯಾದರೆ ಆದಿ ಕರ್ನಾಟಕ, ಆದಿ ಆಂಧ್ರ. ಆದಿ ಆದಿ ದ್ರಾವಿಡದ ನೆಪದಲ್ಲಿ ಪ್ರವರ್ಗ-ಜಿ ಮೆರಿಟ್ ಅಭ್ಯರ್ಥಿಗಳು, ಪ್ರವರ್ಗ-ಎ ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಕಡಿಮೆ ಮೆರಿಟ್ ಇರುವ ಮಾದಿಗ ಸಮುದಾಯಳೊಂದಿಗೆ ಸ್ಪರ್ಧಿಸಿ ಮೇಲುಗೈ ಪಡೆಯುವುದರಿಂದ ನಿಜವಾದ ಮಾದಿಗ ಸಮುದಾಯಗಳ ಅಭ್ಯರ್ಥಿಗಳಿಗೆ ಮತ್ತೊಮ್ಮೆ ನೇಮಕಾತಿಗಳಲ್ಲಿ
ಹಿನ್ನಡೆಯಾಗುವ ಸಂಭವ ಹೆಚ್ಚಿದೆ.
ಇದರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಆದರಿಂದ ಕೂಡಲೇ ಒಳಮೀಸಲಾತಿ ವರ್ಗಿಕರಣದ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಈ ಮೂರು ಸಮುದಾಯದಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈ ಬಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಮಾರೆಪ್ಪ ವಕೀಲರು, ಹೇಮರಾಜ ಅಸ್ಕಿಹಾಳ, ನರಸಿಂಹಲು ಮರ್ಚಟಹಾಳ್,ಆಂಜನೇಯ ಕುರುಬದೊಡ್ಡಿ, ಶ್ರೀನಿವಾಸ್ ಕೊಪ್ಪರ ಇದ್ದರು.