ಮಡಿಕೇರಿ: ಮಕ್ಕಳ ದಿನಾಚರಣೆ ದಿನ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಹಾರಂಗಿ ನಾಲೆಯಲ್ಲಿ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ನಾಲೆ ನೀರಿನಲ್ಲಿ ತೇಲಾಡುತ್ತಿದ್ದ ಮಕ್ಕಳ ಮೃತದೇಹ ನೋಡಿ ಪ್ರತ್ಯಕ್ಷದರ್ಶಿಗಳು ಕಣ್ಣೀರು ಹಾಕುತ್ತಿದ್ದರು.
ತೊರೆನೂರು ಬಳಿ ಹಾರಂಗಿ ಎಡದಂತೆ ನಾಲೆಯಲ್ಲಿ ಶನಿವಾರ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಂದಾಜು 6 ರಿಂದ 8 ವರ್ಷ ಪ್ರಾಯದ ಮಕ್ಕಳು ಜಲಸಮಾಧಿ ಆಗಿದ್ದಾರೆ. ಇಬ್ಬರು ಗಂಡು ಹಾಗೂ ಒಬ್ಬ ಹೆಣ್ಣು ಮಕ್ಕಳ ಶವ ಗೋಚರವಾಗಿದೆ. ನಾಲೆಯಲ್ಲಿ ತೇಲುತ್ತಿದ್ದ ಮೃತದೇಹದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇನ್ನೂ ಕೂಡ ಮೂವರು ಮಕ್ಕಳ ಮಾಹಿತಿ ಪತ್ತೆಯಾಗಿಲ್ಲ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಮೃತದೇಹ ನಾಲೆಯಿಂದ ಹೊರ ತೆಗೆಯಲಾಗಿದೆ.