ಲಕ್ಷ್ಮೇಶ್ವರದ ಪೊಲೀಶರು ರೈತರ ಜಮೀನುಗಳಲ್ಲಿ ಅಲ್ಯೂಮಿನಿಯಂ, ತಾಮ್ರದ ತಂತಿ, ವೈರ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ. 
ಜಿಲ್ಲೆ

ಲಕ್ಷ್ಮೇಶ್ವರ ಪೊಲೀಸರಿಂದ ಕೇಬಲ್ ಕಳ್ಳರ ಬಂಧನ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ರೈತರ ಜಮೀನುಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಅಲ್ಯೂಮಿನಿಯಂ ವಿದ್ಯುತ್ ತಂತಿ ಕಳವು ಮಾಡುತ್ತಿದ್ದ ಮೂವರನ್ನು ಪಟ್ಟಣದ ಪೊಲೀಸರು ಬಂದಿಸಿದ್ದಾರೆ.
ಹೂವಿನಶಿಗ್ಲಿ ಗ್ರಾಮದ ಮಂಜುನಾಥ ಶೆಟ್ಟೆಣ್ಣವರ (31), ಜಗದೀಶ ಹನಮಂತಪ್ಪ ಕನಕಮ್ಮನವರ (22), ತಿಪ್ಪಣ್ಣ ಮಲಕಪ್ಪ ಕಾಳೆ (31)ಬಂದಿತರಾಗಿದ್ದು, ಇವರೆಲ್ಲ ಕೆಇಬಿಯಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಆರೋಪಿಗಳು ಸಮೀಪದ ನಾರಾಯಣಪುರ, ಸುಗ್ನಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಈ ಕೃತ್ಯ ಎಸಗಿದ್ದಾರೆ. ಅವರಿಂದ 880 ಕೆ.ಜಿ ತೂಕದ ಅಂದಾಜು 2.47 ಲಕ್ಷ ಕಿಮ್ಮತ್ತಿನ ಅಲ್ಯೂಮಿನಿಯಂ ತಂತಿ, ಟಾಟಾ ಏಸ್ ವಾಹನ ಜಪ್ತಿ ಮಾಡಲಾಗಿದೆ. ತಾಲೂಕಿನಾದ್ಯಂತ ರೈತರ ಭೂಮಿಗಳಲ್ಲಿನ ಬೆಲೆ ಬಾಳುವ ಕೇಬಲ್, ವೈರ್‌ಗಳು ಕಳ್ಳತನವಾಗುವ ಕುರಿತು ದೂರುಗಳು ಸಲ್ಲಿಕೆಯಾಗಿದ್ದವು. ಎಎಸ್‌ಐ ಎನ್.ಎ. ಮೌಲ್ವಿ, ಸಿಬ್ಬಂದಿ ಎಂ.ಡಿ. ಲಮಾಣಿ, ಡಿ.ಎಸ್. ನಧಾಪ್, ಜಿ.ಆರ್. ಗ್ರಾಮಪುರೋಹಿತ ಅವರು ಹೂವಿನಶಿಗ್ಲಿ ಗ್ರಾಮದಲ್ಲಿ ಗುರುವಾರ ಆರೋಪಿಗಳನ್ನು ಬಂಧಿಸಿದ್ದಾರೆ.