ಚಿತ್ರದುರ್ಗ: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿಕ್ಕಜಾಜೂರು ಹಾಗೂ ಹೊಸದುರ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂ.ಮೌಲ್ಯದ ಬೈಕ್‌ಗಳು,ಒಡವೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಐಷರಾಮಿ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಇಬ್ಬರು ಹದಿಹರೆಯದ ಯುವಕರು ಹಾಗೂ ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಹೊಳಲ್ಕೆರೆ ತಾಲೂಕು ಕೊಡಗವಳ್ಳಿ ಪರಮೇಶ್ವರಪ್ಪ ಎಂಬುವರ ತೋಟದ ಮನೆಯ ಬೀಗ ಮು ರಿದು ಅಲ್ಲಿದ್ದ 15 ಲಕ್ಷ ರೂ.ಮೌಲ್ಯದ ಬಂಗಾರದೊಡವೆ,70 ಸಾವಿರ ರೂ.ನಗದು ಕಳವು ಮಾಡಿದ್ದ ಆರೋಪಿ ಚನ್ನಗಿರಿ ತಾಲೂಕು ಕೊರಟಿಕೆರೆ ನಾಗರಾಜಪ್ಪ ಅಲಿಯಾಸ್ ಕೊರಟಿಗೆರೆ ರಾಜ(45)ನನ್ನು ಬಂಧಿಸಲಾಗಿದೆ.
ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟಿದ್ದ ಬಂಗಾರದೊಡವೆಗಳನ್ನು ವಶಕ್ಕೆ ಪಡೆದು,ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಮೊಬೈಲ್,ರಾಸು,ಡಿಬಿಬಿಎಲ್ ಗನ್,ಮನೆಗಳವು ಇತ್ಯಾದಿ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ ಎಂದರು.
ಬೈಕ್,ಮನೆಗಳವು ಹಾಗೂ ಹುಂಡಿ ಕಳವು ಆರೋಪದಡಿ ಹೊಸದುರ್ಗದ ಕರುಣ ಅಲಿಯಾಸ್ ಕರ್ಣ(18)ಹಾಗೂ ಪ್ರೇಮ ಕು ಮಾರ್(19)ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಚಿತ್ರದುರ್ಗದ ಕೋಟೆ,ಶ್ರೀರಾಂಪುರ,ಹೊಳಲ್ಕೆರೆ,ಹೊಸದುರ್ಗ ಬೆಂಗಳೂರಿನ ಪೀಣ್ಯ ಹಾಗೂ ರಾಜಗೋಪಾಲನಗರ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳವು,ಹೊಸದುರ್ಗ ತಾಲೂಕಿನ ಮೂರು ದೇವಾಲ ಯಗಳಲ್ಲಿ ಹುಂಡಿ ಕಳವು ಮಾಡಿದ್ದ ಈ ಆರೋಪಿಗಳಿಂದ 6.90 ಲಕ್ಷ ರೂ.ಮೌಲ್ಯದ ಐದು ಬೈಕ್‌ಗಳನ್ನು ಹಾಗೂ 1690 ರೂ.ನಗದನ್ನು ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರು ಮೈನರ್ ಆಗಿದ್ದಾಗ ಎಸಗಿದ್ದ ಕಳವು ಕೃತ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಬಾಲಮಂದಿರದಲ್ಲಿದ್ದಾಗ ಅಲ್ಲಿಯ ಸೆಕ್ಯೂರಿಟಿಯ ನ್ನು ಕೂಡಿ ಹಾಕಿ ತಪ್ಪಿಸಿಕೊಂಡಿದ್ದು ಹಾಗೂ ಬೆಂಗಳೂರಿನ ಬಾರ್‌ವೊಂದರಲ್ಲಿ ಕಳ್ಳತನಕ್ಕೂ ಪ್ರಯತ್ನಿಸಿದ್ದ ಇವರು ಸದ್ಯ ಅವರ ಮನೆಯವರ ಸಂಪರ್ಕದಲ್ಲಿ ಇಲ್ಲವೆಂದರು.
12 ಜನರನ್ನು ಬಂಧಿಸಬೇಕಿದೆ
ಮೊಳಕಾಲ್ಮೂರು ತಾಲೂಕು ಜಮೀನೊಂದರಲ್ಲಿ ಗಾಂಜಾ ಬೆಳೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 10 ಜನರನ್ನು ಬಂಧಿಸಿದ್ದು, ಇನ್ನು 12 ಆರೋಪಿಗಳನ್ನು ಬಂಧಿಸಬೇಕಿದೆ. ಆದ್ದರಿಂದಲೇ ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ರುದ್ರೇಶ್ ಬಂಧನದ ಮಾಹಿತಿಯನ್ನು ಕೊಟ್ಟಿರಲಿಲ್ಲವೆಂದು ಎಸ್ಪಿ ಹೇಳಿದರು. ಎಸ್ಪಿ ಎಂ.ಬಿ.ನಂದಗಾವಿ,ಡಿವೈಎಸ್ಪಿಗಳಾದ ರೋಶನ್ ಜಮೀರ್, ಎಸ್.ಪಾಂಡುರಂಗ, ಸಿಪಿಐಗಳಾದ ಎಂ.ಡಿ.ಫೈಜುಲ್ಲಾ,ಕೆ.ಎನ್.ರವೀಶ್ ಮತ್ತಿತರ ಪೊಲೀಸ್ ಅಧಿಕಾರಿಗಳಿದ್ದರು.