ದೂರು ತಾಲೂಕಿನ ಬಿಳಿಗಿರಿರಂಗಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲ.  
ಜಿಲ್ಲೆ

ಹುಂಡಿ ಹಣ ಕದ್ದಿದ್ದ ಮೂವರ ಬಂಧನ

ಯಳಂದೂರು: ತಾಲೂಕಿನ ಪ್ರಸಿದ್ಧ ಪೌರಾಣಿಕ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ವೇಳೆ ಹಣ ಕದ್ದ ಮೂವರನ್ನು ಪೊಲೀಸರು ಬಂಸಿದ್ದಾರೆ.

ಮಂಡ್ಯ ನಗರದ ಶರವಣ, ಗಿರೀಶ್, ಶ್ರೀನಿವಾಸ ಬಂತರು. ಇವರಿಂದ 63,095 ರೂ. ನಗದು ಹಾಗೂ ಇವರು ಬಂದಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ದೇಗುಲ, ಕಂದಾಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ, ವ್ಯವಸ್ಥಾಪನಾ ಸಮಿತಿ ಕೆಲ ಸದಸ್ಯರ ಸಮ್ಮುಖದಲ್ಲಿ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡಲಾಗುತ್ತಿತ್ತು. ಈ ವೇಳೆ ಬ್ಯಾಂಕ್‌ನ ಸಿಬ್ಬಂದಿಯಿಂದ ಚಿಲ್ಲರೆ ನಾಣ್ಯಗಳನ್ನು ಪಡೆದುಕೊಳ್ಳಲು ಇವರು ಪ್ರತಿ ಬಾರಿಯೂ ಬರುತ್ತಿದ್ದರು ಎನ್ನಲಾಗಿದೆ.

ಅಲ್ಲದ, ಈ ಮೂವರೂ ಹುಂಡಿ ಹಣ ಎಣಿಕೆ ಮಾಡುತ್ತಿದ್ದರು. ಎಣಿಕೆ ಸಂದರ್ಭ ಜೇಬಿಗೆ ಹಣ ಹಾಕಿಕೊಂಡು ನಂತರ ಹೊರಕ್ಕೆ ಮೂತ್ರ ವಿಸರ್ಜನೆಗೆಂದು ಹೊರಬಂದು ತಮ್ಮ ವಾಹನದಲ್ಲಿ ಹಣ ಇಡುತ್ತಿದ್ದರು ಎನ್ನಲಾಗಿದೆ.

ಈ ಮೂವರೂ ಜೇಬಿನಲ್ಲಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ದೇಗುಲದ ಸಿಬ್ಬಂದಿ ಕೀರ್ತಿಕುಮಾರ್ ಹಾಗೂ ಬಸವರಾಜು ಅವರಿಗೆ ಅನುಮಾನ ಬಂದಿದೆ. ದೇಗುಲದ ಕಾರ್ಯನಿರ್ವಾಹಕ ಅಕಾರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೇಗುಲದ ಕಾರ್ಯನಿರ್ವಾಹಕ ಅಕಾರಿ ಮೋಹನ್‌ಕುಮಾರ್ ದೂರು ದಾಖಲಿಸಿದ್ದು, ಮೂವರನ್ನು ಬಂಸಿರುವ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.

ದೇಗುಲದಲ್ಲಿ 29.67 ಲಕ್ಷ ರೂ. ಸಂಗ್ರಹ: ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ 29,67,790 ರೂ. ಸಂಗ್ರಹವಾಗಿದೆ. ಅಲ್ಲದೆ 100, 10 ರೂ. ಮುಖ ಬೆಲೆಯ ಅಮೆರಿಕನ್ ಡಾಲರ್, ಯುಎಸ್‌ಎ, ಕತಾರ್‌ನ ನಾಣ್ಯಗಳು ಹಾಗೂ ಅಮಾನ್ಯವಾಗಿರುವ 500 ರೂ. ಮುಖಬೆಲೆಯ 6 ನೋಟುಗಳು ಕೂಡ ಸಿಕ್ಕಿವೆ.