ಮಂಗಳೂರು: ಪೊಲೀಸ್ ಕಮಿಷನರೆಟ್‌ನ ವಿವಿಧ ಠಾಣೆಗಳ ವ್ಯಾಪ್ತಿಯ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಜೂ.29ರಂದು ಪೊಲೀಸರು ಬಂಧಿಸಿದ್ದಾರೆ.
ಬಜಾಲ್ ಕ್ರಾಸ್ ರೋಡ್ ನಿಂದ ಫೈಸಲ್ ನಗರ ಕಡೆಗೆ ಹೋಗುವ ರಸ್ತೆ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಲ್ಲಿ ಸ್ಥಳೀಯ ನಿವಾಸಿ ದ್ವಿತಿನ್ ನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ.
ನವಭಾರತ್ ವೃತ್ತದ ಬಳಿ ಮಾದಕ ವಸ್ತು ಸೇವಿಸಿ ತೂರಾಡುತ್ತಾ ಸಾಗುತ್ತಿದ್ದ ಅಶೋಕನಗರ ನಿವಾಸಿ ಪ್ರಜ್ವಲ್ ಬಿ. ಅಮೀನ್ (23) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ಕಂಡು ಬಂದಿದೆ.
ಮೂಡುಶೆಡ್ಡೆ ಆಶ್ರಯನಗರ ಖಾಲಿ ಮೈದಾನದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಪಿಲಿಕುಳ ನಿಸರ್ಗಧಾಮದ ಬಳಿಯ ನಿವಾಸಿ ಮೊಹಮ್ಮದ್ ಶಾರೂಕ್ (30) ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ಸ್ಪಷ್ಟವಾಗಿದೆ.
ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.