ಮಂಗಳೂರು: ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕದ್ರಿ ಠಾಣಾ ಪೊಲೀಸರು ಅಳಕೆಯ ಮನೆಯೊಂದರಲ್ಲಿ ಜಗಳವಾಡುತ್ತಿದ್ದ ತಣ್ಣೀರುಬಾವಿ ನಿವಾಸಿ, ಅಳಕೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಾದಿಕ್ (41) ಎಂಬಾತನ್ನು ಬಂಧಿಸಿದ್ದಾರೆ. ಆತನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.
ಪಂಜಿಮೊಗರು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡು ಬಂದ ಕೊಡಿಯಾಲಬೈಲು ನಿವಾಸಿ ರಾಜ (54) ಮತ್ತು ಪಂಜಿಮೊಗರು ಮಾಲಾಡಿ ಕೋರ್ಟ್‌ನಲ್ಲಿ ಪಂಜಿಮೊಗು ನಿವಾಸಿ ರಾಧಾಕೃಷ್ಣನ್ ನಾಯರ್ ಯು.(58) ಎಂಬಾತನನ್ನು ಕಾವೂರು ಠಾಣೆ ಪೊಲೀಸರು ಬಂದಿಸಿದ್ದಾರೆ.