ಗ್ರಾಮಾಂತರ ಠಾಣೆ ಪೊಲೀಸರು ಗಾಂಜಾ, ಬೈಕ್ ವಶಕ್ಕೆ ಪಡೆದಿರುವುದು. ಲೋಕೇಶ್, ಚಂದ್ರಶೇಖರ್, ನಾಗರಾಜ್, ಶಿವಾನಂದ ನಿಂಗಪ್ಪ ರುದ್ರಟಿ, ಹರೀಶ್, ವಸಂತ್ ಇತರರಿದ್ದರು. 
ಜಿಲ್ಲೆ

‘ಗಾಂಜಾ’ ಮೂವರು ಆರೋಪಿಗಳ ಬಂಧನ

ನಾಗೇಶ ಎಸ್

ಅರಸೀಕೆರೆ: ಗ್ರಾಮಾಂತರ ಠಾಣೆ ಪೊಲೀಸರು ಮೂರು ಲಕ್ಷ ರೂ. ಮೌಲ್ಯದ ಗಾಂಜಾ, ಮೊಬೈಲ್, ದ್ವಿಚಕ್ರ ವಾಹನ ಸಹಿತ ಮೂವರು ಆರೋಪಿಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ಮಾರುತಿನಗರ ಬಡಾವಣೆಯ ಕಾರು ಚಾಲಕ ಪ್ರಜ್ವಲ್(21), ಮೈಕ್ರೋಫೈನಾನ್ಸ್ ಏಜೆಂಟ್ ಪೃಥ್ವಿ(31) ಹಾಗೂ ಶಿವಾನಂದ ಕಾಲನಿ ಶಿಕ್ಷಕನ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಗಗನ್ (21) ಬಂಧಿತ ಆರೋಪಿಗಳು.

ಪ್ರಜ್ವಲ್ ಹಾಗೂ ಗಗನ್ ಒಡಿಶಾ ರಾಜ್ಯದಿಂದ ರೈಲಿನ ಮೂಲಕ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಕಾಟೀಕೆರೆ ಕೆಳ ಸೇತುವೆ ಬಳಿ ಎಸೆಯಲು ಯತ್ನಿದ್ದಾರೆ. ಕೂಡಲೇ ಎಚ್ಚೆತ್ತ ರೈಲಿನಲ್ಲಿ ಮಫ್ತಿಯಲ್ಲಿದ್ದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮತ್ತೊಬ್ಬ ಆರೋಪಿ ಪೃಥ್ವಿ ಮನೆಯಲ್ಲಿ ಗಾಂಜಾ ಸಂಗ್ರಹ ಮಾಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಪೃಥ್ವಿ ಮನೆ ಮೇಲೆ ದಾಳಿ ನಡೆಸಿ, ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಎಸ್‌ಪಿ ಮಹಮ್ಮದ್ ಸುಜೀತಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ್, ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪ್ರಕರಣ ದಾಖಲಿಸಿಕೊಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿವೈಎಸ್ಪಿ ಲೋಕೇಶ್, ಇನ್‌ಸ್ಪೆಕ್ಟರ್ ಚಂದ್ರಶೇಖರ್, ಪಿಎಸ್‌ಐಗಳಾದ ನಾಗರಾಜ್, ಶಿವಾನಂದ ನಿಂಗಪ್ಪ ರುದ್ರಟಿ, ಎಎಸ್‌ಐ ರಂಗಸ್ವಾಮಿ, ಹರೀಶ್, ವಸಂತ್, ಗಿರೀಶ್, ಶಿವರಾಜ್ ಇದ್ದರು.