ಪುತ್ತೂರು: ಬ್ಯಾಂಕ್ ಅಽಕಾರಿಗಳು ಸಾಲ ವಸೂಲಾತಿಗೆ ಮನೆಗೆ ಹೋದಾಗ ದ್ವಿಚಕ್ರ ವಾಹನ ಹಾಗೂ ಪೆಟ್ರೋಲ್ ಪಂಪ್ ಉದ್ಯಮಿಯೊಬ್ಬರು ಪಿಸ್ತೂಲ್ ತೋರಿಸಿ ಹೆದರಿಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಬಲ್ನಾಡು ಗ್ರಾಮದ ಉಜುರುಪಾದೆ ನಿವಾಸಿ ಕೀರ್ತಿ ಅಖಿಲೇಶ್ ಎಂಬುವರು ಎಸ್.ಬಿ.ಐ.ಯಿಂದ ೨ ಕೋಟಿ ರೂ. ಸಾಲ ಪಡೆದ್ದು, ಮರುಪಾವತಿ ಮಾಡಿರಲಿಲ್ಲ. ಹಲವಾರು ಬಾರಿ ಲೀಗಲ್ ನೋಟೀಸ್ ನೀಡಲಾಗಿತ್ತು.. ಬ್ಯಾಂಕ್ ಮೇಲಽಕಾರಿಗಳ ಮೌಖಿಕ ಆದೇಶದಂತೆ ಸೆ.೨೫ರಂದು ಮಧ್ಯಾಹ್ನ ಸಿಬ್ಬಂದಿ ಆಕಾಶ್ ಚಂದ್ರಬಾಬು, ದಿವ್ಯಶ್ರೀ ಅವರೊಂದಿಗೆ ಸಾಲಗಾರರ ಮನೆಗೆ ಹೋಗಿದ್ದಾರೆ.
ಕೀರ್ತಿ ಅಖಿಲೇಶ್ ಮನೆ ಒಳಗೆ ಬರಮಾಡಿಕೊಂಡು ಗಂಡನಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ಮನೆಗೆ ಬಂದು ಬ್ಯಾಂಕ್‌ನವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೆ ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ದ್ದಾರೆ. ಕೃಷ್ಣ ಕಿಶೋರ್ ಬಂದು ಬ್ಯಾಂಕಿನವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಕೋರ್ಟ್ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ರಿಲೇಶನ್‌ಷಿಪ್ ಮ್ಯಾನೇಜರ್ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಎಚ್.ಸಿ (೪೦) ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.