ಉಡುಪಿ: ಪೊಲೀಸ್ ಕಮಿಷನರ್ ಹೆಸರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ವಂಚಿಸುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಘ ಸಂದೇಶ, ಪ್ರೇಮ್ ಕುಮಾರ್, ಶಿವಪ್ರಸಾದ್ ಆರೋಪಿಗಳು.
ಫೆ.15ರಂದು ಮಲ್ಪೆಯಿಂದ ವಢಬಾಂಢೇಶ್ವರ ಕಡೆಗೆ ಹೋಗುತ್ತಿದ್ದ ಸಿಟಿ ಬಸ್‌ನ್ನು ‘ಪೊಲೀಸ್’ ಸ್ಟಿಕರ್ ಅಂಟಿಸಿದ್ದ ಖಾಸಗಿ ವಾಹನದಲ್ಲಿ ಬಂದ ರಾಘ ಸಂದೇಶ ಎಂಬಾತ ಅಡ್ಡಗಟ್ಟಿ ಪೊಲೀಸ್ ಕಮೀಷನರ್ ಎಂದು ಹೇಳಿ ಚಾಲಕನಿಗೆ ಬೆದರಿಸಿದ್ದ. ಮಾಹಿತಿ ತಿಳಿದ ಮಲ್ಪೆ ಪೊಲೀಸರು ದಾಖಲೆ ಪರಿಶೀಲಿಸಿದಾಗ ನಕಲಿ ಪೊಲೀಸ್ ಎಂಬುದು ತಿಳಿದಿತ್ತು. ಜತೆಗಿದ್ದ ಇಬ್ಬರನ್ನೂ ಬಂಧಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.