ಜಿಲ್ಲೆ

ತಿರುಪತಿ ಮಾತ್ರವಲ್ಲ ಮಲೆಮಹದೇಶ್ವರ ಬೆಟ್ಟದಲ್ಲೂ ಜನವೋ ಜನ..! ನಿರೀಕ್ಷೆಗೂ ಮೀರಿ ಆಗಮಿಸಿದ ಭಕ್ತರು

ಚಾಮರಾಜನಗರ: ಇತ್ತೀಚೆಗೆ ತಿರುಪತಿಯಲ್ಲಿ ಭಾರೀ ಭಕ್ತರ ಆಗಮನದಿಂದ ತಿಮ್ಮಪ್ಪನ ದರ್ಶನಕ್ಕೆ ದಿನಗಟ್ಟಲೇ ಕಾಯುವಂತಹ ಪರಿಸ್ಥಿತಿ ಇತ್ತು, ಇದೀಗ ಇಂತಹದ್ದೇ ಪರಿಸ್ಥಿತಿ ಮಲೆ ಮಹದೇಶ್ವರ ದೇವಾಲಯದಲ್ಲೂ ನಿರ್ಮಾಣವಾಗಿದೆ.

ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ‌ ಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ಪ್ರಯುಕ್ತ ಭಕ್ತರ ದಂಡು ಹರಿದು ಬರುತ್ತಿದೆ‌.

ಹಿಂದಿನ ಅಮಾವಾಸ್ಯೆಗಳಲ್ಲಿ ಕಡಿಮೆ ಭಕ್ತರನ್ನು ಕಂಡಿದ್ದ ಸ್ಥಳೀಯರು ನಿರೀಕ್ಷೆ ಮೀರಿ ಜನ ಆಗಮಿಸುತ್ತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವರ ದರ್ಶನಕ್ಕಾಗಿ ಭಕ್ತರ ಸಾಲುಗಟ್ಟಿ ನಿಂತಿದ್ದಾರೆ.

ಸರತಿ ಸಾಲಿನಲ್ಲಿ ಮೊದಲು ಮುಂದೆ ಸಾಗಲು ಭಕ್ತರ ನಡುವೆ ಜಗಳ‌ ನಡೆದಿದೆ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಮಾಡಿಕೊಂಡಿದ್ದ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗಿದೆ. ನೆರಳಿಲ್ಲದೆ ಬಿಸಿಲಿನಲ್ಲಿ ಭಕ್ತರು ನಿಲ್ಲುವಂತಾಗಿದೆ. (ದಿಗ್ವಿಜಯ ನ್ಯೂಸ್​)