ಬನಹಟ್ಟಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಭವ್ಯ ಮೂರ್ತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಹಿರೇಮಠದ ಶ್ರೀ ಶರಣಬಸವೇಶ್ವರ ಶಿವಾಚಾರ್ಯರು, ಶಿವಾನಂದ ಬಾಗಲಕೋಟಮಠ, ದುಂಡಯ್ಯ ಕಾಡದೇವರ, ಡಾ. ಉಮಾಶೇಖರಯ್ಯ ಸ್ವಾಮಿಹಿರೇಮಠ ಇದ್ದರು. 
ಜಿಲ್ಲೆ

ಸಮಾಜದ ಅಭಿವೃದ್ಧಿಗೆ ಚಿಂತನೆಗಳು ಅಗತ್ಯ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ-ಬನಹಟ್ಟಿ: ಜಂಗಮ ಸಮಾಜದ ಅಭಿವೃದ್ಧಿಗಾಗಿ ಚಿಂತನೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಜಂಗಮ ಸಮಾಜದ ಸವಾಲು, ಕೊರತೆ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಮತ್ತು ಸಂಘಟನೆ ಕುರಿತು ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಂಗಮರ ಮಕ್ಕಳು ಮತ್ತು ಯುವಕರು ವಿಭೂತಿಧಾರಿಗಳಾಗುವ ಜತೆಗೆ ಲಿಂಗಧಾರಣೆ ಮಾಡುವ ಜತೆಗೆ ಲಿಂಗಪೂಜೆ ಮಾಡಬೇಕು. ಜಂಗಮರು ಪ್ರಯತ್ನವಾದಿಗಳಾದಾಗ ಮಾತ್ರ ಸಮಾಜದ ಸಂಘಟನೆ ಸಾಧ್ಯ ಎಂದರು.

ಚಿಮ್ಮಡ ವಿರಕ್ತಮಠದ ಪ್ರಭುದೇವರು ಮಾತನಾಡಿ, ಜಂಗಮರು ತಮ್ಮ ಮೂಲ ತತ್ವ, ಆಚಾರ ವಿಚಾರಗಳನ್ನು ತಮ್ಮ ಮಕ್ಕಳಿಗೆ ಕಲಿಸಬೇಕು. ಜಂಗಮರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಮಾಜದ ಪ್ರತಿಭಾವಂತ ಮಕ್ಕಳು ಸರ್ಕಾರಿ ನೌಕರಿಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಂಗಮರು ಒಗ್ಗಟ್ಟಾಗಬೇಕು ಎಂದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಹಟಗಾರ ದೈವ ಮಂಡಳಿ ಅಧ್ಯಕ್ಷ ಶ್ರೀಶೈಲ ಧಬಾಡಿ, ಶಿವರುದ್ರಯ್ಯ ಕಾಡದೇವರ ಮಾತನಾಡಿದರು. ಸಮಾಜದ ಅಧ್ಯಕ್ಷ ದುಂಡಯ್ಯ ಲಿಂಗದ ಅಧ್ಯಕ್ಷತೆ ವಹಿಸಿದ್ದರು.

ಡಾ. ಉಮಾಶೇಖರಸ್ವಾಮಿ ಹಿರೇಮಠ, ಗುರುಪಾದಯ್ಯ ಅಮ್ಮಣಗಿಮಠ, ದುಂಡಯ್ಯ ಕಾಡದೇವರ, ಚಂದ್ರಶೇಖರ ಕಾಡದೇವರ, ರಾಜು ಮಠದ, ಗುರುಪಾದಯ್ಯ ಚಟ್ಟಿಮಠ, ಮಲ್ಲಯ್ಯ ಮಠಪತಿ, ಈಶ್ವರಯ್ಯ ಕಾಡದೇವರ, ಈರಯ್ಯ ವಿಭೂತಿ, ಗಿರೀಶ ಕಾಡದೇವರ, ಈರಯ್ಯ ಪರಾಳಮಠ, ಸಿದ್ದಯ್ಯ ಕಾಡದೇವರ, ಮಹೇಶ ಬಂಗಿ, ವೀರಭದ್ರಶಾಸ್ತ್ರಿ ಹಿರೇಮಠ, ಕಾಡಯ್ಯ ಕಾಡದೇವರ, ಸತೀಶ ಬಂಗಿ, ಶಂಕರ ಅಂಗಡಿ, ಅದೃಷಯ್ಯ ಕಾಡದೇವರ ಇತರರಿದ್ದರು.

ಭವ್ಯ ಮೂರ್ತಿ ಮೆರವಣಿಗೆ

ಜಗದ್ಗುರು ರೇಣುಕಾಚಾರ್ಯರ ಭವ್ಯ ಮೂರ್ತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ನಡೆಯಿತು. ಹಿರೇಮಠದ ಶರಣ ಬಸವ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಮಹಿಳೆಯರು ಆರತಿ ಮತ್ತು ಕುಂಭ ಹೊತ್ತು ಭಾಗವಹಿಸಿದ್ದರು. ಸಾವಿತ್ರಿ ಕಾಡದೇವರ, ಮಹಾದೇವಿ ಕಾಡದೇವರ, ಬೌರವ್ವ ಕಾಡದೇವರ, ಜಯಶ್ರೀ ಕಾಡದೇವರ, ಹೇಮಾ ಕಾಡದೇವರ ನೇತೃತ್ವ ವಹಿಸಿದ್ದರು.