ಜಿಲ್ಲೆ

14ರಂದು ವೈಚಾರಿಕ ಓಕುಳಿ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ನಗರದ ಬಸವೇಶ್ವರ ಸರ್ಕಲ್ ಸಮುದಾಯ ಭವನದಲ್ಲಿ ಮಾ.14ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚಿಂತನಸಿರಿ ವೇದಿಕೆಯಿಂದ 19ನೇ ವರ್ಷದ ವೈಚಾರಿಕ ಓಕುಳಿ ಆಯೋಜಿಸಲಾಗಿದೆ ಎಂದು ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಲಝರಿಯ ಜ್ಞಾನಮಯಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಚಿಂತನಸಿರಿ ಗೌರವ ಅಧ್ಯಕ್ಷ ಡಾ.ಎಂ.ಆರ್. ದೇಸಾಯಿ ಅಧ್ಯಕ್ಷತೆ ವಹಿಸುವರು. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮೋಹನ ಕಾತರಕಿ ವೈಚಾರಿಕ ಓಕುಳಿಗೆ ಚಾಲನೆ ನೀಡಲಿದ್ದಾರೆ.

ಚಿಂತನಸಿರಿ ಅಧ್ಯಕ್ಷ ಡಾ. ಶಿವಾನಂದ ಕುಬಸದ, ನ್ಯಾಯವಾದಿ ಐ.ಎಚ್.ಅಂಬಿ, ವೆಂಕಣ್ಣ ಪಡತಾರೆ, ಡಾ.ಜಯಪ್ರಭು ಉತ್ತೂರ, ಮೈಸೂರಿನ ರವೀಂದ್ರ, ಬಾಬು ಹೊಸಕೋಟಿ, ಎಂ.ಎಂ. ವಿರಕ್ತಮಠ, ಡಾ.ಸಂಗಮೇಶ ಕಲ್ಯಾಣಿ, ಡಾ.ಗುರುರಾಜ ಪಾಟೀಲ, ವೆಂಕಣ್ಣ ವಾಸನದ, ವಿಶ್ವನಾಥ ಮುನವಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಜನಪದ ಕಲಾವಿದ ಗುರುರಾಜ ಹೊಸಕೋಟಿ, ವಿ.ಬಿ. ಸಿಂಗರಡ್ಡಿ, ಅಶೋಕ ಓಸ್ವಾಲ್ ಮತ್ತಿತರರು ಉಪಸ್ಥಿತರಿರುವರು ಎಂದರು.

ರಮೇಶ ಅಣ್ಣಿಗೇರಿ, ಡಾ.ಡಿ.ಎಂ. ಬೆಣ್ಣೂರ, ಮಡಿವಾಳಪ್ಪ ಪರೀಟ ಮತ್ತಿತರರಿದ್ದರು.