ಜಿಲ್ಲೆ

ಚಿಂತನೆಗಿದೆ ಜಗತ್ತು ಬದಲಿಸುವ ಶಕ್ತಿ

ಗೋಕಾಕ: ಒಂದು ಸಣ್ಣ ಚಿಂತನೆಗೂ ಜಗತ್ತನ್ನು ಬದಲಿಸುವ ಶಕ್ತಿಯಿದೆ ಎಂದು ಆಂಧ್ರಪ್ರದೇಶ ಹಾಲ್ವಿಯ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 183ನೇ ಶಿವಾನುಭವಗೋಷ್ಠಿ ಹಾಗೂ ಲಿಂ. ಚನ್ನಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ ನಿಮಿತ್ತ ಲಿಂಗಾಯತ ಮಹಿಳಾ ವೇದಿಕೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಶಿಷ್ಯನಲ್ಲಿರುವ ಬೌದ್ಧಿಕ ಮಟ್ಟವನ್ನು ಅರಿತು ಅವರನ್ನು ಇನ್ನೊಬ್ಬರಿಗೆ ಗುರುವಾಗುವ ರೀತಿ ಬೆಳೆಸಬೇಕು. ಗುರುಗಳು ಮೌಢ್ಯ ವಿರೋಧಿಸಬೇಕು. ಅಂದಾಗ ಶಿಷ್ಯರಿಂದ ಸದಢ ಸಮಾಜ ನಿರ್ಮಿಸಲು ಸಾಧ್ಯ. ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.

ಮುರುರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ, ಬಸನಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ಲಿಂಗಾಯತ ಮಹಿಳಾ ವೇದಿಕೆಯ ನೂತನ ಅಧ್ಯೆಯಾಗಿ ಆಯ್ಕೆಯಾದ ಭಾರತಿ ಮರೆನ್ನವರ ಅವರಿಗೆ ನಿಕಟಪೂರ್ವ ಅಧ್ಯೆ ಶೆಲಾ ಬಿದರಿ ಅಧಿಕಾರ ಹಸ್ತಾಂತರಿಸಿದರು. ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಮೆಲಾರಲಿಂಗ ಉಪ್ಪಿನ, ಡಿ.ಎನ್​.ಬೆಟ್ಟದಗೌಡರ, ವಿನಾಯಕ ಪಾಟೀಲ, ವಿನುತಾ ನಾವಲಗಿ ಉಪಸ್ಥಿತರಿದ್ದರು.