ಬೆಂಗಳೂರು: ಜನಮನ ಪ್ರತಿಷ್ಠಾನ ಹಾಗೂ ಭಾರತ ಯಾತ್ರಾ ಕೇಂದ್ರ ಸಹಯೋಗದಲ್ಲಿ ಭಾನುವಾರ (ಸೆ. 8ರಂದು) ‘ಪ್ರಜಾಪ್ರಭುತ್ವ - ಸಂವಿಧಾನ - ಒಕ್ಕೂಟ ವ್ಯವಸ್ಥೆ’ ಚಿಂತನಾ ಸಮಾವೇಶ ಆಯೋಜಿಸಿದೆ.
ನಗರದ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗೋಷ್ಠಿಗಳು ನಡೆಯಲಿದ್ದು, ‘ಬಹುತ್ವ ಭಾರತದಲ್ಲಿ ಏಕಸಂಸ್ಕೃತಿಯ ಅಪಾಯಗಳು’ ವಿಷಯ ಕುರಿತು ಡಾ. ರಾಜೇಂದ್ರ ಚೆನ್ನಿ ಹಾಗೂ ‘ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಪರಿಪಾಲನೆಯ ಹೊಣೆಗಾರಿಕೆ’ ವಿಷಯ ಕುರಿತು ಜಾಣಗೆರೆ ವೆಂಕಟರಾಮಯ್ಯ ಮಾತನಾಡಲಿದ್ದಾರೆ. ಡಾ. ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.