ಹುಬ್ಬಳ್ಳಿ : ವರೂರು ಶ್ರೀ ನವಗ್ರಹ ತೀರ್ಥದ ನವತೀರ್ಥಂಕರರ ಮಹಾಮಸ್ತಕಾಭಿಷೇಕ ಪೂರ್ವಭಾವಿ ಸಭೆ ಹಾಗೂ ಸಮಸ್ತ ಸ್ವಸ್ತಶ್ರೀ ಭಟ್ಟಾರಕರ ಸಮ್ಮೇಳನವನ್ನು ನವಗ್ರಹ ತೀರ್ಥಕ್ಷೇತ್ರದಲ್ಲಿ ಜು. 13 ಮತ್ತು 14ರಂದು ಆಯೋಜಿಸಲಾಗಿದೆ.
ಜು. 13ರಂದು ಜೈನ ಸಮಾಜ, ಜೈನ ಮಠಗಳು-ವರ್ತಮಾನ ಹಾಗೂ ಭವಿಷ್ಯ ಚಿಂತನ ಮಂಥನ ನಡೆಯಲಿದೆ. 14ರಂದು ಬೆಳಗ್ಗೆ 10 ಗಂಟೆಗೆ ಶ್ರೀ ನವಗ್ರಹ ತೀರ್ಥದ ನವತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ-2025 ಹಾಗೂ ನವನಿರ್ವಿುತ ಸುಮೇರು ಪರ್ವತ ಲೋಕಾರ್ಪಣೆ- ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಕುರಿತು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.