ಜಿಲ್ಲೆ

ಚಾಕು, ಪಿಸ್ತೂಲ್ ಇಟ್ಟುಕೊಂಡವರು ವಶಕ್ಕೆ

ಹುಬ್ಬಳ್ಳಿ: ಕಾರಿನಲ್ಲಿ ಬಟನ್ ಚಾಕು ಮತ್ತು ಏರ್ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ರೋಹಿತ ಹಿರೇಕೆರೂರ, ಪ್ರವೀಣ ಕಲ್ಯಾಣಶೆಟ್ಟರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಣಿ ವಿಲಾಸ ಸರ್ಕಲ್‌ನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆ ಆರೋಪಿತರು ಬಿಎಂಡಬ್ಲುೃ ಕಾರ್ ಕಳ್ಳತನ ಮಾಡಿ ತೆಗೆದುಕೊಂಡು ಬಂದಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ಓರ್ವನ ಹತ್ತಿರ ಬಟನ್ ಚಾಕು ಹಾಗೂ ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಏರ್ ಪಿಸ್ತೂಲ್ ಇಟ್ಟುಕೊಂಡಿದ್ದರು. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.