ನರಗುಂದ: ಮತದಾನ ಕಾರ್ಯ ಅತ್ಯಂತ ಪವಿತ್ರವಾದುದು. 18 ವರ್ಷ ಪೊರೈಸಿದ ಪ್ರತಿಯೊಬ್ಬರೂ ತಮ್ಮ ಹೆಸರನ್ನು ನೂತನ ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಂಡರೆ ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಕೊಣ್ಣೂರ ಬಿಎಲ್ಒ ಶಾರದಾ ರೋಣದ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದ ಕೆ.ಇಎಸ್ ಪದವಿಪೂರ್ವ ಕಾಲೇಜ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಎಂ. ಮಾಕಣ್ಣವರ ಮಾತನಾಡಿ, ವಿದ್ಯುನ್ಮಾನ ಮತಯಂತ್ರದ ಬಳಕೆ ಹಾಗೂ ವಿಎಚ್ಎ ಮೊಬೈಲ್ ಆಪ್ ಮೂಲಕ ನೂತನ ಮತದಾರರು ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾಲೇಜ್ ಪ್ರಾಚಾರ್ಯ ಎಸ್.ಕೆ. ಜೋಶಿ, ಬಿಎಲ್ಒಗಳಾದ ಗಿರಿಜಾ ಮಾಚಕನೂರ, ಎ.ಬಿ. ಬಂದೋಜಿ, ಕಾಲೇಜ್ ಉಪನ್ಯಾಸಕರು ಇದ್ದರು.