Dasara 2013: Weights of the elephants in kgs were - Arjuna, Gajendra, Balarama, Abhimanyu, Varalakshmi and Sarala 
ಜಿಲ್ಲೆ

ಈ ಬಾರಿ ದಸರಾ ಆನೆಗಳಿಗೆ ಬೆಣ್ಣೆ ಇಲ್ಲ..!

ಮೈಸೂರು: ಪ್ರತಿ ವರ್ಷ ದಸರಾ ಆನೆಗಳಿಗೆ ಬೆಣ್ಣೆ ನೀಡಲಾಗುತಿತ್ತು. ಆದರೆ, ಈ ಬಾರಿ ಬೆಣ್ಣೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭು ಗೌಡ ತಿಳಿಸಿದರು.

ಶಿಬಿರದಲ್ಲಿಯೂ ಯಾವುದೇ ಆನೆಗಳಿಗೆ ಬೆಣ್ಣೆ ನೀಡುವುದಿಲ್ಲ. ಹೀಗಾಗಿ ಆನೆಗಳಿಗೆ ಬೆಣ್ಣೆ ತಿನ್ನುವ ಅಭ್ಯಾಸವಿಲ್ಲ. ಕಳೆದ ಬಾರಿ 4 ಆನೆಗಳು ಮಾತ್ರ ಬೆಣ್ಣೆ ತಿನ್ನುತ್ತಿದ್ದವು. ಬೆಣ್ಣೆಯಿಂದ ಆನೆಗಳಿಗೆ ಹೇಳಿಕೊಳ್ಳುವ ಮಟ್ಟದಲ್ಲಿ ಪೋಷಕಾಂಶಗಳು ಸೇರುತ್ತಿರಲಿಲ್ಲ. ಕೇವಲ ಸರಾಗವಾಗಿ ಲದ್ದಿ ವಿಸರ್ಜನೆ ಮಾತ್ರ ಅನುಕೂಲವಾಗುತ್ತಿತ್ತು. ಹೀಗಾಗಿ ಆನೆ ವೈದ್ಯರು ಮತ್ತು ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಈ ಬಾರಿಯಿಂದ ಬೆಣ್ಣೆ ನೀಡುವುದನ್ನು ಕೈ ಬಿಡಲಾಗಿದೆ ಎಂದು ತಿಳಿಸಿದರು.

ಬೆಣ್ಣೆ ನೀಡುವುದನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಅದರ ಬದಲು ಹುರುಳಿ ಮತ್ತು ರಾಗಿ ನೀಡಲಾಗುತ್ತಿದೆ. ಹುರುಳಿ ಆಹಾರದಿಂದ ಜೀರ್ಣಕ್ರಿಯೆ ಸರಾಗವಾಗಿಸಲಿದೆ. ರಾಗಿ ಪೌಷ್ಠಿಕ ಆಹಾರವಾಗಿದೆ. ದಸರಾ ಮುಗಿಯುವವರೆಗೂ ಇದೆ ಮೇವನ್ನು ನೀಡಲಾಗುವುದು ಎಂದು ಹೇಳಿದರು.