ಶ್ರವಣ್‌ಕುಮಾರ್ ನಾಳ, ಮಂಗಳೂರು
ಕರಾವಳಿಗೆ ಈಬಾರಿ ಉತ್ತಮ ಮುಂಗಾರಿನ ಆರಂಭ ದೊರೆಯಲಿದೆ. ಇದಕ್ಕೆ ಮುನ್ನುಡಿಯಾಗಿ ಪೂರ್ವ ಮುಂಗಾರು ಮಳೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈಬಾರಿ ಹೆಚ್ಚು.
ಮಾರ್ಚ್ 1ರಿಂದ ಮೇ31ರ ವರೆಗೆ 99 ಮಿ.ಮೀ. ಸರಾಸರಿ ಮಳೆಯಾಗುವುದು ವಾಡಿಕೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೇ12ರ ವರೆಗೆ ಸರಾಸರಿ 28.ಮಿಮಿ ಮಳೆಯಾಗುವಲ್ಲಿ 62ಮಿಮಿ ಮಳೆಯಾಗಿದೆ. ಕಳೆದ ವರ್ಷ ಪೂರ್ವ ಮುಂಗಾರಿನಲ್ಲಿ 94ಮಿಮಿ ಕೊರತೆ ಮಳೆಯಾಗಿತ್ತು. 2022ರಲ್ಲಿ 96.2 ಮಳೆಯಾಗುವ ಮೂಲಕ 3 ಮಿ.ಮೀ. ಮಳೆ ಕೊರತೆಯಾಗಿತ್ತು. 2020ರಲ್ಲಿ 15 ಮಿ.ಮೀ ಕೊರತೆ ಮಳೆಯಾಗಿತ್ತು. ಆದರೆ ಕಳೆದ ವರ್ಷ ಕಾಣಿಸಿಕೊಳ್ಳದ ಬೇಸಿಗೆ ಮಳೆ ಈ ಬಾರಿ ಕಾಣಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಈ ಬಾರಿ ಹೆಚ್ಚುವರಿ ಮಳೆಯಾದ ಪರಿಣಾಮ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.
*ಉತ್ತಮ ಮುಂಗಾರಿಗೆ ಮುನ್ನುಡಿ
ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಜೂ.30ಕ್ಕೆ 860.73 ಮಿ.ಮಿ ವಾಡಿಕೆ ಮಳೆ, ಜುಲೈ 15ಕ್ಕೆ 1425.5 ಮಿ.ಮಿ, ಜುಲೈ 30ಕ್ಕೆ 2027 ಮಿ.ಮಿ , ಆಗಸ್ಟ್ 15ರ ವೇಳೆ 2465.6 ಮಿ.ಮಿ ಹಾಗೂ ಆ.30ರ ವೇಳೆಗೆ 2671.3 ವಾಡಿಕೆ ಮಳೆಯಾಗಬೇಕು. ಕಳೆದ 5 ವರ್ಷಗ ಸರಾಸರಿ ಗಮನಿಸಿದರೆ ಕರಾವಳಿಗೆ ಮುಂಗಾಋಉ ಪೂರ್ವ, ಮುಂಗಾರು ಉತ್ತಮವಾಗಿರಲಿಲ್ಲ. ಈಬಾರಿ ತ್ತಮವಾದ ಮುಂಗಾರು ಪೂರ್ವ ಮಳೆಗೆ ಆರಂಭಿಕ ಚಾಲನೆ ದೊರಕಿದೆ. ಹವಾಮಾನ ಇಲಾಖೆ ವಿಜ್ಞಾನಿಗಳ ಮಾಹಿತಿಯಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಕೊರತೆ ಇಲ್ಲ. ಪೂರ್ವ ಮುಂಗಾರು ಉತ್ತಮವಾಗಿಗಿದೆ. ಮುಂದಿನ ತಿಂಗಳಾಂತ್ಯಕ್ಕೆ ಚಂಡಮಾರುತಗಳ ಪ್ರಭಾವವೂ ಎದುರಾಗುವ ಸಾಧ್ಯತೆ ಇದೆ. ಪರಿಣಾಮ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಈ ಬಳಿಕ ಮುಂಗಾರು ಪ್ರವೇಶ ಬಳಿಕ ಕೂಡ ಉತ್ತಮ ಮಳೆಯಾಗಲಿದೆ.
-----------------------
ಕೈಕೊಟ್ಟ ಹಿಂಗಾರು- ನೀರಿನ ಕೊರತೆ
2023ರಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.24 ರಷ್ಟು ಕಡಿಮೆ ಮಳೆ ಸುರಿದಿದೆ. ಈ ವೇಳೆ ಕರಾವಳಿಗೆ ಹಿಂಗಾರು ಕೂಡ ಕೈ ಹಿಡಿದಿಲ್ಲ. ವಾಡಿಕೆಯಂತೆ ಅ.1ರಿಂದ ನ.30ರ ವರೆಗೆ 261 ಮಿ.ಮೀ. ಹಿಂಗಾರು ಮಳೆಯಾಗಬೇಕು. ತಜ್ಞರ ಅಭಿಪ್ರಾಯದಂತೆ ಕರಾವಳಿಯ ಭೌಗೋಳಿಕ ವಿನ್ಯಾಸ ಹಾಗೂ ಇಲ್ಲಿನ ಕೃಷಿ, ಕೃಷಿಯೇತರ ಚಟುವಟಿಕೆಗೆ ಹಿಂಗಾರು ಅವಧಿಯಲ್ಲಿ ಸರಾಸರಿ 153.3 ಮಿ.ಮೀ.(ಶೇ.58.7) ಮಳೆ ಅಗತ್ಯ. ಆದರೆ ಮಳೆಯಾಗಿರುವುದು 89ಮಿ.ಮಿ ಮಾತ್ರ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ 1981ರ ನಂತರ 2016ರಲ್ಲಿ ಮೊದಲ ಬಾರಿಗೆ ಕರಾವಳಿಯಲ್ಲಿ 112.2ಮಿ.ಮಿ(-57 ಶೇ.) ಮಳೆ ಕನಿಷ್ಠ ಪ್ರಮಾಣದ ಹಿಂಗಾರು ಮಳೆಯಾಗಿದೆ. 1992ರ ಅಕ್ಟೋಬರ್ 1ರಿಂದ ನ.30ರ ವರೆಗೆ 357.5 ಮಿ.ಮೀ.(136.7ಶೇ.) ಮಳೆ ಈ ವರೆಗಿನ ಗರಿಷ್ಠ ಹಿಂಗಾರು.
------------------------
ಈ ಬಾರಿ ರಾಜ್ಯದ ಎಲ್ಲ ಭಾಗದಲ್ಲೂ ಗುಡುಗು, ಸಿಡಿಲಿನ ಜತೆಗೆ ಉತ್ತಮ ಬೇಸಿಗೆ ಮಳೆಯಾಗುವ ನಿರೀಕ್ಷೆ ಇದ್ದು, ಅಧಿಕ ತಾಪಮಾನದಿಂದ ಸ್ಥಳೀಯ ಮೋಡಗಳು ಜತೆಗೂಡಿ ಬೇಸಿಗೆ ಮಳೆಗೆ ಅವಕಾಶ ನೀಡುತ್ತದೆ. ತಾಪಮಾನ ಏರಿದಷ್ಟು ಮಳೆಯ ಪ್ರಮಾಣ ಕೂಡ ಏರುತ್ತದೆ. ಕಳೆದ ಮೂರು ತಿಂಗಳಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗಿರುವುದರಿಂದ ಈ ಬಾರಿ ಮುಂಗಾರು ಮಳೆಯ ಕೊರತೆ ಕಡಿಮೆ.
ಎ.ಡಿ. ಪ್ರಸಾದ್, ಹಿರಿಯ ವಿಜ್ಞಾನಿ, ಭಾರತೀಯ ಹವಾಮಾನ ಇಲಾಖೆ ( ಐಎಂಡಿ)