ಮುಂಡರಗಿ ಸೊಳ್ಳೆ, ತಿಗಣಿ ಹಾಗೂ ನೊರ್ಜುಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಬೇಕು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಡಾ.ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಸಂಘದಿಂದ ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಸೊಳ್ಳೆ, ನೊರ್ಜು, ತಿಗಣಿಗಳು ಹೆಚ್ಚಾಗಿದ್ದು, ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿದೆ. ಆದ್ದರಿಂದ ಎಲ್ಲ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಪ್ರತಿ ಎರಡು ದಿನಕೊಮ್ಮೆಯಾದರೂ ಫಾಗಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ನೂರುಲ್ಲಾಖಾನ್ ಅವರು, ಎರಡು ದಿನದೊಳಗಾಗಿ ಪಟ್ಟಣದಲ್ಲಿ ಫಾಗಿಂಗ್ ಮಾಡಲಾಗುವುದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಅಡಿವೆಪ್ಪ ಛಲವಾದಿ, ಮಂಜುನಾಥ ಕಟ್ಟಿಮನಿ, ಪ್ರಕಾಶ ದೊಡ್ಡಮನಿ, ಹುಲಿಗೆಪ್ಪ ಬಂಡಿವಡ್ಡರ, ನಾಗರಾಜ ರಾಮೇನಹಳ್ಳಿ, ಹಸನ್ ಅಳವಂಡಿ, ಹನಮಂತಪ್ಪ ಭಜಂತ್ರಿ, ರವಿ ಭಜಂತ್ರಿ, ಜಾಫರ್ಸಾಬ್, ರಮೇಶ ಕೊಪ್ಪಳ, ಯಲ್ಲಪ್ಪ ಭಜಂತ್ರಿ ಮಂಜುನಾಥ ಅಳವಂಡಿ, ಸುರೇಶ ಬಂಡಿವಡ್ಡರ, ಪ್ರವೀಣ ಭಜಂತ್ರಿ ಇತರರು ಇದ್ದರು.