ವಿಜಯವಾಣಿ ಸುದ್ದಿಜಾಲ ಗುರುಪುರ
ಶತಮಾನೋತ್ಸವ ಆಚರಿಸುತ್ತಿರುವ ಸರ್ಕಾರಿ ಶಾಲೆಯ ಮೂಲಕ ಇಂದು ವಾಮಂಜೂರಿನ ತಿರುವೈಲಿಗೆ ಐತಿಹಾಸಿಕ ದಿನವಾಗಿದೆ. 30ಕ್ಕೆ ಇಳಿದಿದ್ದ ತಿರುವೈಲು ಸರ್ಕಾರಿ ಶಾಲೆಯ ಮಕ್ಕಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಿದ್ದರ ಹಿಂದೆ ಕಠಿಣ ಶ್ರಮವಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಕ್ಕಳಿಗೆ ಶಿಕ್ಷಣದ ತಳಹದಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಾಮಂಜೂರು ತಿರುವೈಲು ಸರ್ಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಶಾಲಾ ಶತಮಾನೋತ್ಸವ ಕಟ್ಟಡ ಉದ್ಘಾಟನೆ ಹಾಗೂ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ಲಭಿಸಿದರೆ, ಮುಂದೆ ಆ ಮಕ್ಕಳು ನಾಡು ಕಟ್ಟುವವರಾಗುತ್ತಾರೆ. ಮಕ್ಕಳಿಗೆ ಸ್ವ-ಚಿಂತನೆಯ ಮೂಲಕ ಸಾಧನೆಗೈಯುವ ಶಿಕ್ಷಣದ ಅಗತ್ಯವಿದೆ. ಶಾಲಾಭಿವೃದ್ಧಿಗೆ ಸರ್ಕಾರದಿಂದ 83 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಶತಮಾನೋತ್ಸವ ಕಟ್ಟಡ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ದಿಕ್ಸೂಚಿ ಭಾಷಣ ಮಾಡಿದರು. ಎಂಎಲ್‌ಸಿ ಮಂಜುನಾಥ ಭಂಡಾರಿ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸುಷ್ಮಾ ವಿ.ಕಿಣಿ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಹಾಗೂ ಸನ್ಮಾನಿತ ನಿವೃತ್ತ ಶಿಕ್ಷಕರ ಪರವಾಗಿ ನೀಲಮ್ಮ ಮಾತನಾಡಿದರು.
ವಾಮಂಜೂರು ಶ್ರೀರಾಮ ಭಜನಾ ಮಂದಿರದಿಂದ ತಿರುವೈಲು ಶಾಲೆವರೆಗೆ ಆಕರ್ಷಕ ಮೆರವಣಿಗೆ ಸಾಗಿ ಬಂತು. ವಾಮಂಜೂರಿನ ಜಾಣು ಶೆಟ್ಟಿ ಮೊಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ ಧ್ವಜಾರೋಹಣಗೈದರು. ಶಾಲೆಯ ಶತಮಾನೋತ್ಸವ ಸ್ಮರಣಾರ್ಥ ‘ಶತಾಂಜಲಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ, ಗೌರವಾಧ್ಯಕ್ಷ ವೇಲುಸ್ವಾಮಿ, ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ್ ಬಂಗೇರ, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಹಳೇ ವಿದ್ಯಾರ್ಥಿ ಶರತ್ ಬುಡಾಲೆ, ಮಾಜಿ ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಎಂಆರ್‌ಪಿಎಲ್ ಅಧಿಕಾರಿ ಸೀತಾರಾಮ ರೈ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಶಿಕ್ಷಣ ಇಲಾಖೆಯ ಅನ್ನಪೂರ್ಣ, ತಹಶೀನ್, ವಿಶ್ವನಾಥ, ಮಾಜಿ ಕಾರ್ಪೋರೇಟರ್‌ಗಳಾದ ಭಾಸ್ಕರ್ ಕೆ., ವಿನಯರಾಜ್, ಅನಿಲ್ ಕುಮಾರ್, ಪ್ರವೀಣ್ ಆಳ್ವ ತಿರುವೈಲುಗುತ್ತು , ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಘು ಸಾಲ್ಯಾನ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಗಿರೀಶ್ ಆಚಾರ್ಯ, ಮುಖ್ಯಶಿಕ್ಷಕಿ ಪುಷ್ಪಾವತಿ, ಶಿಕ್ಷಕ-ಶಿಕ್ಷಕೇತರ ವರ್ಗ, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿವಿಧ ಸಮಿತಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.
ತಿರುವೈಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಯು. ಸ್ವಾಗತಿಸಿದರು. ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ರಾಜೀವ ಪೂಜಾರಿ ಕೊಳಕೆಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆ ಉಳಿಸುವ ನಿಟ್ಟಿನಲ್ಲಿ, ಆಧುನಿಕ ಶಿಕ್ಷಣದ ಅಗತ್ಯಗಳಿಗೆ ತಕ್ಕಂತೆ ಪಠ್ಯಗಳಲ್ಲಿ ಬದಲಾವಣೆಯಾಗಬೇಕು. ಮಕ್ಕಳ ಮಾನಸಿಕ ಬೆಳವಣಿಗೆಗೆ ಮೊಬೈಲ್ ತಂತ್ರಜ್ಞಾನ ಅಡ್ಡಿಯಾಗಿರುವುದು ಕಳವಳಕಾರಿ ವಿಷಯ. ಶಾಲೆಗಳಲ್ಲಿ ಮಾನವೀಯ ಶಿಕ್ಷಣದೊಂದಿಗೆ ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಮಹತ್ವದ ಜವಾಬ್ದಾರಿ ಶಿಕ್ಷಕರಿಗಿದೆ. ಡಾ.ಭರತ್ ಶೆಟ್ಟಿ, ಶಾಸಕ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಮಕ್ಕಳ ಶಿಕ್ಷಣದ ಬುನಾದಿ. ಎಲ್ಲರಿಗೂ ಶಿಕ್ಷಣ ಸಿಗಬೇಕು. ಪ್ರಸಕ್ತ ಕಾಲಘಟ್ಟದಲ್ಲಿ ಸರ್ಕಾರಿ ಸಹಿತ ಸರ್ಕಾರಿ ಅನುದಾನಿತ ಶಾಲೆಗಳೂ ಮುಚ್ಚುವಂತಿವೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾದರೆ ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಸಾಧ್ಯವಿದೆ. ಇಲ್ಲದಿದ್ದರೆ ಈಗ ಕುಂಟುತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳು ಮುಂದಿನ ದಿನಗಳಲ್ಲಿ ಮುಚ್ಚಿ ಹೋಗಬಹುದು. ಕನ್ನಡ ಶಾಲೆಗಳು ಉಳಿಯದಿದ್ದರೆ ಕನ್ನಡಕ್ಕೆ ಭವಿಷ್ಯವಿಲ್ಲ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಡಾ.ಎಂ.ಮೋಹನ್ ಆಳ್ವ, ಅಧ್ಯಕ್ಷರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ https://www.vijayavani.net/dharmanema https://www.vijayavani.net/brahmabaidarkala-nemotsava-gone-muhurta