ಜಿಲ್ಲೆ

ಸಿಐಟಿ ಕಾಲೇಜಿನ ಶೈಲಜಾಗೆ ಮೂರನೇ ರ್ಯಾಕ್

ಮಾದೇಶ್ ತಿ.ನರಸೀಪುರ

ಗೋಣಿಕೊಪ್ಪಲು: ಪೊನ್ನಂಪೇಟೆ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲನಿರ್ಂಗ್ ವಿಭಾಗದ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿನಿ ಶೈಲಜಾ 9.55 ಸಿಜಿಪಿಎ ಅಂಕಗಳೊಂದಿಗೆ 2021-25ನೇ ಶೈಕ್ಷಣಿಕ ಸಾಲಿನ ವಿಟಿಯು ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯ ಮಟ್ಟದಲ್ಲಿ 3ನೇ ರ‌್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಸವರಾಜ್ ಮುಂದಾಳತ್ವದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಬಿ.ರಾಮಕೃಷ್ಣ ಹಾಗೂ ಅಧ್ಯಾಪಕರ ಸಮರ್ಥ ಮಾರ್ಗದರ್ಶನದ ಫಲವಾಗಿ ಸಾಧನೆ ಸಾಧ್ಯವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.