ಜಿಲ್ಲೆ

ಟೆನಿಸ್ ಸ್ಪರ್ಧೆಯಲ್ಲಿ ಎಂ.ಸ್ಫಟಿಕಾಗೆ ತೃತೀಯ ಬಹುಮಾನ

ಅವಿನಾಶ್ ಜೈನಹಳ್ಳಿ

ಮೈಸೂರು: ಮನುಷ್ಯನಿಗೆ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಗರದ ಅಂಗವಿಕಲರಾದ ಎಂ.ಸ್ಫಟಿಕ ಅವರೇ ಸಾಕ್ಷಿ. ಎಂ. ಸ್ಫಟಿಕ ಅವರು ಮಾ.27 ರಿಂದ 31ರವರೆಗೆ ನವದೆಹಲಿಯ ಮಾಡ್ರನ್ ಸ್ಕೂಲ್ ಬರಖಾಂಬ ವತಿಯಿಂದ ನಡೆದ ಅಂಗವಿಕಲರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಲಾಂಗ್ ಟೆನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿ ತೃತೀಯ ಬಹುಮಾನ ಗಳಿಸಿ ಸಾಧನೆಗೈದಿದ್ದಾರೆ.

ಸ್ಫಟಿಕ ಅವರು ಪ್ರಸ್ತುತ ನಗರದ ಮೈತ್ರಿ ಚಾರಿಟಬಲ್ ಟ್ರಸ್ಟ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವೈಶಾಲಿ ಮತ್ತು ನಗರಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ದಂಪತಿ ಪುತ್ರಿ. ಸ್ಫಟಿಕ ಅವರಿಗೆ ಜಯಪ್ರಕಾಶ್ ತರಬೇತುದಾರರಾಗಿದ್ದಾರೆ.