ಜಿಲ್ಲೆ

ಆಯುರ್ವೇದ ಕಾಲೇಜು ಆರಂಭಕ್ಕೆ ಚಿಂತನೆ

ನಿಪ್ಪಾಣಿ: ನಮ್ಮ ಮಂಡಳದಿಂದ ಆಯುರ್ವೇದಿಕ ಮಹಾವಿದ್ಯಾಲಯ ಆರಂಭಿಸಲು ಚಿಂತನೆ ನಡೆದಿದೆ ಎಂದು ಸ್ಥಳಿಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸ್ಥಳಿಯ ವಿಎಸ್​ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ವಿಎಸ್​ಎಂ ಕನ್ವೆನ್ಶನ್​ ಕೊಠಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ವಿಟಿಯುನಡಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಚಾಲ್ತಿ ವಿದ್ಯಾರ್ಥಿವೇತನಗಳೊಂದಿಗೆ ಇನ್ನು ಹೆಚ್ಚಿನ ಸೌಲಭ್ಯ ನೀಡಲಾಗುವುದು. ಎಂದರು.

ಉಪಕಾರ್ಯಾಧ್ಯ ಪಪ್ಪು ಪಾಟೀಲ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಪಪೂ ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ ಮಾತನಾಡಿದರು. ಮಂಡಳದ ಅಧ್ಯ ಚಂದ್ರಕಾಂತ ತಾರಳೆ ಅಧ್ಯತೆ ವಹಿಸಿದ್ದರು. ಸಂಚಾಲಕ ರಾವಸಾಹೇಬ ಪಾಟೀಲ ಹಿಂದಿನ ವರ್ಷದ ನಡಾವಳಿ ಓದಿ ಅನುಮೋದನೆ ಪಡೆದರು. ಕಾರ್ಯಾಧ್ಯ ಚಂದ್ರಕಾಂತ ಕೋಠಿವಾಲೆ ಉಳಿದ ಎಲ್ಲ ವಿಷಯಗಳಿಗೆ ಅನುಮೋದನೆ ಪಡೆದುಕೊಂಡರು. ಪ್ರಾಚಾರ್ಯರಾದ ಡಾ.ಉಮೇಶ ಪಾಟೀಲ, ಬಸವರಾಜ ಕರೋಶಿ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ೇಮಾಭಿವದ್ಧಿ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಂಅಲಿ ಪೀರಜಾದೆ, ಪ್ರೊ.ಬಾಹುಬಲಿ ಮಗದುಮ ಅವರನ್ನು ಸತ್ಕರಿಸಲಾಯಿತು.

ಉಪಾಧ್ಯ ಸುನೀಲ ಪಾಟೀಲ, ರಜತ ಢೋಲೆ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಆನಂದ ಗಿಂಡೆ, ಅವಿನಾಶ ಪಾಟೀಲ, ಪ್ರವಿಣ ಪಾಟೀಲ, ಸಚಿನ ಹಾಲಪ್ಪನವರ, ಶೇಖರ ಪಾಟೀಲ, ರುದ್ರಕುಮಾರ ಕೋಠಿವಾಲೆ, ಸಂಜಯ ಶಿಂತ್ರೆ, ಕೆಎಲ್​ಇ ನಿರ್ದೇಶಕ ಪ್ರವಿಣ ಬಾಗೇವಾಡಿ, ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ನಗರಸಭೆ ಮಾಜಿ ಉಪಾಧ್ಯ ಸುನೀಲ ಪಾಟೀಲ, ಮಹಾಲಿಂಗೇಶ ಕೋಠಿವಾಲೆ, ರವಿಂದ್ರ ಶೆಟ್ಟಿ ಇತರರಿದ್ದರು.